ಲೇಖನಗಳು

ನಿರ್ಮಲ ಭಾಗ್ಯ

ಅಂಬೇಡ್ಕರ್, ಗಾಂಧೀ ಹಾಗೂ ಬಸವಣ್ಣನ ತತ್ವಗಳ ಪ್ರತಿಪಾದಕರಾದ ಕರ್ನಾಟಕದ ಮುಖ್ಯಮಂತ್ರಿ ಶ್ರೀ.ಸಿದ್ದರಾಮಯ್ಯನವರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದರಲ್ಲಿ ರಾಜ್ಯವನ್ನು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬ ಮಹತ್ವದ ಯೋಜನೆಯೂ ಸಹ ಒಂದಾಗಿದೆ.

ರಾಮತಾಳ-ಮರೋಳ : ಏಷ್ಯಾದ ಅತಿ ದೊಡ್ಡ ಹನಿನೀರಾವರಿ ಯೋಜನೆ

ಅವಶ್ಯಕ ಪ್ರದೇಶಗಳಲ್ಲಿ ನೀರಿನ ಸಮರ್ಥ ಬಳಕೆಯು ಕೇವಲ ಬೆಳೆಯ ಹೆಚ್ಚಿಸುವುದು ಮಾತ್ರವಲ್ಲದೇ ಹೆಚ್ಚಿನ ಪ್ರದೇಶದ ಕೃಷಿಗೆ ನೀರನ್ನು ಒದಗಿಸುತ್ತದೆ. ನೀರಿನ ಅಭಾವ ಇರುವ ನಮ್ಮ ರಾಜ್ಯದ ಒಳಿತಿಗಾಗಿ ಕರ್ನಾಟಕ ಸರ್ಕಾರವು ಏಷ್ಯಾದ ಅತಿ ದೊಡ್ಡ ರಾಮತಾಳ-ಮರೋಳ ನೀರಾವರಿ ಯೋಜನೆಯ 2 ನೇ ಹಂತದ ಕಾಮಗಾರಿಗೆ ಚಾಲನೆ ನೀಡಿದೆ.

371(ಜೆ) ವಿಧಿಯಡಿಯಲ್ಲಿ ಹೈದರಾಬಾದ್-ಕರ್ನಾಟಕದ ಸಮಗ್ರ ಅಭಿವೃದ್ಧಿ

ಹಲವಾರು ವರ್ಷಗಳ ಹೋರಾಟದ ಫಲವಾಗಿ ಯುಪಿಎ ಸರ್ಕಾರವು 2012 ರಲ್ಲಿ ಸಂವಿಧಾನದಲ್ಲಿ ತಿದ್ದುಪಡಿಯನ್ನು ತಂದು 371(ಜೆ) ವಿಧಿಯನ್ನು ಜಾರಿಗೊಳಿಸಿತು. ಹೈದರಾಬಾದ್ – ಕರ್ನಾಟಕದ ಅಭಿವೃದ್ಧಿಯ ಸಲುವಾಗಿ ಜಾರಿಗೊಂಡ ಈ ಕಾಯ್ದೆಯ ಜಾರಿಗಾಗಿ ದಿವಂಗತ.ಧರಂ ಸಿಂಗ್ ಮತ್ತು ಶ್ರೀ.ಮಲ್ಲಿಕಾರ್ಜುನ್ ಖರ್ಗೆ ಹಾಗೂ ಇನ್ನಿತರೆ ಕಾಂಗ್ರೆಸ್ ನ ನಾಯಕರು ಸೇರಿ ಅವಿರತವಾಗಿ ಶ್ರಮಿಸಿದರು.