ಬೆಂಗಳೂರು

ಕಿದ್ವಾಯಿ ಸ್ಮಾರಕ ಗ್ರಂಥಿವಿಜ್ಞಾನ ಸಂಸ್ಥೆ

ಕಿದ್ವಾಯಿ ನೆನಪಿನ ಗ್ರಂಥಿವಿಜ್ಞಾನ ಸಂಸ್ಥೆ 1957ರಲ್ಲಿ ನಮ್ಮ ನಾಡಪ್ರಭುಗಳಿಂದ ಸ್ಥಾಪಿಸಲ್ಪಟ್ಟ ಒಂದು ಖಾಸಗಿ ಸಂಸ್ಥೆ. ಕರ್ನಾಟಕ ಸರ್ಕಾರ 1971 ರಲ್ಲಿ ಈ ಸಂಸ್ಥೆಯನ್ನು ತನ್ನ ಆಧೀನಕ್ಕೆ ತೆಗೆದುಕೊಂಡಿದ್ದಲ್ಲದೆ ಸ್ವತಂತ್ರ ಸಂಸ್ಥೆಯನ್ನಾಗಿ ಪರಿವರ್ತಿಸಿತು.

ಬಿಬಿಎಂಪಿ ಹಣಕಾಸು ನಿರ್ವಹಣೆ : ಖಾತೆಗಳ ಬಲವರ್ಧನೆ, ಆದಾಯ ಹೆಚ್ಚಿಸುವಿಕೆ, ಆಸ್ತಿ ತೆರಿಗೆ ಸುಧಾರಣೆ

ಹಿಂದಿನ ಸರ್ಕಾರಗಳು ಉಳಿಸಿಕೊಂಡೇ ಬಂದಿರುವ ಹಳೆಯ ಸಾಲಗಳನ್ನು ಚುಕ್ತಾ ಮಾಡಲು ಬಿಬಿಎಂಪಿಯು ಕಳೆದ ನಾಲ್ಕು ವರ್ಷಗಳಿಂದ ಹಣಕಾಸು ಸುಧಾರಣೆಯ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದೆ.

ನಗರಾಭಿವೃದ್ಧಿ ಇಲಾಖೆ

ಸಚಿವ ಕೆ.ಜೆ. ಜಾರ್ಜ್ ಅವರ ಸಾರಥ್ಯದಲ್ಲಿ ನಗರಾಭಿವೃದ್ಧಿ ಇಲಾಖೆಯು ಅತ್ಯಂತ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಯೋಜನೆ ರೂಪಿಸುವುದು, ಅಭಿವೃದ್ಧಿ ಪಡಿಸುವುದು ಸೇರಿದಂತೆ ನಗರದ ಎಲ್ಲ ಮೂಲಸೌಕರ್ಯಗಳ ಯೋಜನೆಗಳ ಅನುಷ್ಠಾನಕ್ಕೆ ಸಚಿವರು ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುತ್ತಿದ್ದಾರೆ.

ಬಿ.ಎಂ.ಟಿ.ಸಿ.

ಇಡೀ ದೇಶದಲ್ಲೇ ಅತ್ಯುತ್ತಮವಾದ ಸಾರಿಗೆ ಸೌಲಭ್ಯ ವ್ಯವಸ್ಥೆಯನ್ನು ಹೊಂದಿರುವ ಸರ್ಕಾರೀ ಸಾರಿಗೆ ಸಂಸ್ಥೆಯಾದ ಬಿಎಂಟಿಸಿ (ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಷನ್ ಪ್ರತಿದಿನ 50 ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರ ಪ್ರಯಾಣಕ್ಕೆ ನೆರವಾಗಿದೆ. ಇದಕ್ಕಾಗಿ ಸಾರಿಗೆ ಸಂಸ್ಥೆಯು 6323 ಬಸ್ ಗಳನ್ನು ಏರ್ಪಡಿಸಿದ್ದು 74600 ಬಾರಿ ಸಂಚಾರ ಗೊಳ್ಳುತ್ತಿದೆ.