/ department

ಸಹಕಾರ ಇಲಾಖೆ

ಕರ್ನಾಟಕ ರಾಜ್ಯದಲ್ಲಿ ಸಹಕಾರ ಘಟಕವು ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳ ಎಲ್ಲಾ ವ್ಯಾಪ್ತಿಯನ್ನು ತಲುಪಿದೆ. ಆಡಳಿತ ವಲಯದ ನಿರಂತರವಾದ ಶ್ರಮದಿಂದ ಸಹಕಾರಗಳು ವಿವಿಧ ವಲಯಗಳಿಗೆ ಸಹಕಾರ ಇಲಾಖೆಯ ಕಾರ‍್ಯಕ್ರಮಗಳು ಯಶಸ್ವಿಯಾಗಿ ತಲುಪಿವೆ. ಪ್ರ ಅವುಗಳಲ್ಲಿ ಮುಖ್ಯವಾದವುಗಳೆಂದರೆ ಕೃಷಿ ಸಾಲ ವಿತರಣೆ, ರಸಗೊಬ್ಬರ ವಿತರಣೆ, ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣೆ, ಹೈನುಗಾರಿಕೆ, ಮೀನುಗಾರಿಕೆ, ನೇಕಾರರು, ತೆಂಗಿನ ನಾರು, ಕೈಮಗ್ಗ ಮತ್ತು ಗ್ರಾಮೀಣ ಸಹಕಾರ ಬ್ಯಾಂಕ್. ರಾಜ್ಯವು ಹಲವು ರೀತಿಯ ಸಹಕಾರ ಸಂಘಗಳನ್ನು ಹೊಂದಿದೆ. ಒಟ್ಟಾರೆಯಾಗಿ ೩೪,೬೬೪ ಸಹಕಾರ ಸಂಘಗಳು ಚಾಲ್ತಿಯಲ್ಲಿದ್ದು ಸಹಕಾರ ಸಂಘದ ಕುಲಸಚಿವರ ಆಡಳಿತದಲ್ಲಿದೆ.
ಸಹಕಾರೀ ಇಲಾಖೆಯ ಸಚಿವರಾಗಿದ್ದ ಮಾಜಿ ಮಂತ್ರಿಗಳಾಗಿದ್ದ ದಿವಂಗತ ಹೆಚ್. ಎಸ್. ಮಹದೇವ ಪ್ರಸಾದ್‌ರವರು ಬಿಡುವಿಲ್ಲದೆ ತಮ್ಮ ಕೊನೆಯ ಉಸಿರಿರುವವರೆಗೆ ಇಲಾಖೆಯು ಅಗ್ರಸ್ಥಾನಕ್ಕೇರಲು ನಿರಂತರವಾಗಿ ಶ್ರಮವಹಿಸಿದ್ದರು. ಈ ನಾಕ್ಷತ್ರಿಕವಾದ ಕೆಲಸವನ್ನು ಶ್ರೀ ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಅವರು ನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಇಲಾಖೆಯು ಮಾಡಿದ ಮಹತ್ತರವಾದ ಸಾಧನೆಗಳನ್ನು ಈ ಕೆಳಗೆ ನೀಡಲಾಗಿದೆ.

ಕೃಷಿ ಸಾಲದ ಮನ್ನಾ
೨೧ನೇ ಜೂನ್ ೨೦೧೭ರಂದು ಮಖ್ಯಮಂತ್ರ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಕಳೆದ ಕೆಲವು ವರ್ಷಗಳಿಂದ ಬರ ಪರಿಸ್ಥಿತಿಯಿಂದ ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುವ ರೈತರಿಗೆ ನೆರವಾಗಲು ೨೨,೨೭,೫೦೬ ರೈತರ ೫೦,೦೦೦ ರೂಪಾಯಿಗಳ ಕೃಷಿ ಸಾಲವನ್ನು ಸಹಕಾರ ಬ್ಯಾಂಕ್‌ಗಳಿಂದ ಪಡೆದಿರುವ ೮,೧೬೫ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿರುತ್ತಾರೆ.

೨೦೧೩ರಲ್ಲಿ ಶ್ರೀ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಭರವಸೆ ನೀಡಲಾದಂತೆ ೧೦.೭ ಲಕ್ಷ ರೈತರ ೨,೩೫೦ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿ ಒಬ್ಬ ರೈತ ಮಾತ್ರ ರೈತರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬುದನ್ನು ಅಕ್ಷರಶಃ ಸಾಬೀತು ಮಾಡಿದ್ದಾರೆ. ಈ ಹಿಂದಿನ ಸರಕಾರವು ಕೃಷಿಕರ ಬದುಕಿನ ಮೇಲೆ ಕಾಳಜಿಯಿಲ್ಲದಂತೆ ೨೫,೦೦೦ದಂತೆ ೪ ಲಕ್ಷ ಕೃಷಿಕರ ಕೇವಲ ೯೪೦ ಕೋಟಿ ರೂಪಾಯಿಗಳನ್ನು ಮಾತ್ರ ಮನ್ನಾ ಮಾಡಿದೆ.

image3

೨೦೧೬-೧೭ನೇ ಸಾಲಿನಲ್ಲಿ ೪,೯೪೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸುಮಾರು ೬.೮ ಲಕ್ಷ ಹೊಸ ಕೃಷಿಕರಿಗೆ ಕೃಷಿ ಸಾಲವನ್ನು ನೀಡಿದೆ.

ಬಡ್ಡಿರಹಿತ ಸಾಲ
ಭಾರತದಲ್ಲಿ ಮೊಟ್ಟ ಮೊದಲನೆಯದಾಗಿ ಮುಖ್ಯ ಮಂತ್ರಗಳಾದ ಶ್ರೀ ಸಿದ್ಧರಾಮಯ್ಯನವರು ಕೃಷಿ ಸಮುದಾಯದ ನೆರವಿಗಾಗಿ ಬಡ್ಡಿರಹಿತ ಕೃಷಿ ಸಾಲದ ಮಿತಿಯನ್ನು ೧ ಲಕ್ಷದಿಂದ ೩ ಲಕ್ಷಕ್ಕೆ ಹೆಚ್ಚಿಸಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ಸರ್ಕಾರವು ೩೬.೬ ಕೋಟಿ ರೂಪಾಯಿ ಮೌಲ್ಯದ ಬಡ್ಡಿರಹಿತ ಸಾಲವನ್ನು ವಿತರಿಸಿದೆ.

ಕೃಷಿಕರ ದೀರ್ಘ ಮತ್ತು ಮಧ್ಯಮ ಕಾಲದ ಅಗತ್ಯತೆಗಳಿಗೆ ಬೆಂಬಲ ನೀಡಲು ಧೀರ್ಘಕಾಲದ ಕೃಷಿಸಾಲವನ್ನು ೩ ಲಕ್ಷ ರೂಪಾಯಿಗಳಿಂದ ೧೦ ಲಕ್ಷ ರೂಪಾಯಿಗಳಿಗೆ ಶೇ. ೩ ಬಡ್ಡಿಯಂತೆ ಹೆಚ್ಚಿಸಲಾಗಿದೆ. ಆರ್ಥಿಕ ವರ್ಷ ೨೦೧೭-೧೮ರಲ್ಲಿ ಸರ್ಕಾರವು ೧೩,೫೦೦ ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದ್ದು ೨೫ ಲಕ್ಷ ಕೃಷಿಕರಿಗೆ ಕೃಷಿಸಾಲವನ್ನು ವಿತರಿಸುವ ಗುರಿಯನ್ನು ಹೊಂದಿದೆ.

ಸಾಲ ಮನ್ನಾ ಯೋಜನೆ ಮತ್ತು ಮರುಪಾವತಿಯ ವಿಸ್ತರಣೆ
ಕಳೆದ ಕೆಲವು ವರ್ಷಗಳಿಂದ ತೀವ್ರವಾದ ಬರ ಪರಿಸ್ಥತಿಯನ್ನು ಪರಿಗಣಿಸಿ ಸರ್ಕಾರವು ಕೃಷಿಕರಿಗೆ ಬಲ ತುಂಬುವ ಸಲುವಾಗಿ ೨ ಯೋಜನೆಗಳನ್ನು ಕೈಗೊಂಡಿದೆ.

ರೈತರು ೨೦೧೫ - ೧೬ರಲ್ಲಿ ಪಡೆದ ಅಲ್ಪಾವಧಿ ಮತ್ತು ಧೀರ್ಘಾವಧಿ ಕೃಷಿ ಸಾಲದ ಕಂತನ್ನು ಸಹಕಾರ ಸಂಘಗಳಿಗೆ ಪಾವತಿಸಲು ಇದ್ದ ಕಾಲಾವಧಿಯನ್ನು ಒಂದು ವರ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ಸರ್ಕಾರವು ೪೫ ಕೋಟಿ ರೂಪಾಯಿ ಬಡ್ಡಿ ಅನುದಾನವನ್ನು ೨ ಲಕ್ಷ ರೂಪಾಯಿ ಪರವಾಗಿ ಪಾವತಿಸಿದೆ.
ರಾಜ್ಯದಲ್ಲಿ ನಿರಂತರವಾದ ಬರ ಪರಿಸ್ಥಿತಿಯ ಪರಿಣಾಮವಾಗಿ ಎಲ್ಲಾ ರೀತಿಯ ಕೃಷಿ ಸಾಲದ ಬಾಕಿಯನ್ನು ಭರಿಸಲು ಇದ್ದ ಕೊನೆಯ ದಿನಾಂಕವನ್ನು ೩೦-೦೯-೨೦೧೫ ರಿಂದ ೩೦-೦೯-೨೦೧೬ಕ್ಕೆ ಹಾಗೂ ನಂತರದಲ್ಲಿ ೩೧-೦೩-೨೦೧೭ಕ್ಕೆ ವಿಸ್ತರಿಸಲಾಯಿತು. ಇದರಿಂದಾಗಿ ೭೪,೫೨೫ ರೈತರು ೧೨೫ ಕೋಟಿ ರೂಪಾಯಿಯ ಬಡ್ಡಿ ಪರಿಹಾರವನ್ನು ಪಡೆದಿದ್ದಾರೆ.

image4

ಯಶಸ್ವಿನಿ ಯೋಜನೆ
ಅತಿ ಹೆಚ್ಚು ಯಶಸ್ವಿಯಾದ ಆರೋಗ್ಯ ವಿಮಾ ಯೋಜನೆಯನ್ನು ೨೦೧೪ರಿಂದ ನಗರ ಸಹಕಾರಗಳಿಗೆ ವಿಸ್ತರಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ೧.೬೩ ಕೋಟಿ ಸದಸ್ಯರ ನೊಂದಣಿಯಾಗಿದ್ದು ೫.೯ ಫಲಾನುಭವಿಗಳು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ ಮತ್ತು ೭.೮ ಲಕ್ಷ ಹೊರ ರೋಗಿ ಫಲಾನುಭವಿಗಳು ೮೩೧ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಚಿಕಿತ್ಸೆಯನ್ನ ಪಡೆದಿದ್ದಾರೆ.

ಪಶು ಭಾಗ್ಯ
ಈ ಯೋಜನೆಯಲ್ಲಿ ೫೦,೦೦೦ ರೂಪಾಯಿಗಳನ್ನು ೦% ಬಡ್ಡಿಯಂತೆ ಸಹಕಾರ ಬ್ಯಾಂಕ್‌ಗಳಿಂದ ರೈತರಿಗೆ ಅಲ್ಪಾವಧಿ ಕೃಷಿ ಸಾಲವನ್ನು ಹಸುಗಳಿಗೆ ಆಹಾರ ಮತ್ತು ಇತರೆ ನಿರ್ವಹಣೆ ವೆಚ್ಚವಾಗಿ ನೀಡಲಾಗುವುದು.

ಸಹಕಾರ ಸಂಘಗಳಿಗೆ ದಾಖಲಾತಿ
ಕಳೆದ ನಾಲ್ಕು ವರ್ಷಗಳಲ್ಲಿ ೪೪ ಕೋಟಿ ರೂಪಾಯಿಗಳ ಸಹಾಯದಿಂದ ಬಡತನ ರೇಖೆಗಿಂತ ಕಡಿಮೆ ಇರುವ, ಪರಿಶಿಷ್ಟ ಜಾತಿ/ವರ್ಗ, ಮಹಿಳೆಯರು, ಅಂಗವೈಪಲ್ಯತೆಯುಳ್ಳ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ಜನಾಂಗದವರನ್ನೊಳಗೊಂಡು ೧೦ ಲಕ್ಷಕ್ಕೂ ಹೆಚ್ಚು ಜನರು ತಮ್ಮ ಹೆಸರನ್ನು ವಿವಿಧ ಸಹಕಾರ ಸಂಘಗಳಲ್ಲಿ ದಾಖಲಿಸಿದ್ದಾರೆ.

ಮಹಿಳಾ ಸಬಲೀಕರಣ
ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಪ್ರತಿ ಎಪಿಎಂಸಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ೧ ರಿಂದ ೩ ಕ್ಕೆ ಹೆಚ್ಚಿಸುವ ಮೂಲಕ ತಾವು ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ.

ಅಭಿವೃದ್ಧಿ
ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿಯವರು ಎಲ್ಲಾ ಸಹಕಾರಿ ಸಂಘಗಳ ಕಾರ್ಯನಿರ್ವಾಹಕ ಸಭೆಯಲ್ಲಿ ವೈಯಕ್ತಿಕ ಸದಸ್ಯತ್ವವನ್ನು ಖಾತರಿ ಪಡಿಸಲು ನಿಯಮವನ್ನ ಮಂಡಿಸಲಾಗಿದೆ. ಇದರಿಂದಾಗಿ ಈ ಜನಾಂಗದವರಿಗೆ ಆಡಳಿತ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಅವಕಾಶ ಕಲ್ಪಿಸಿದಂತಾಗಿದೆ.

ಕೊಳವೆಗಳ ಸಾಲ ಮನ್ನಾ
ಸುಮಾರು ೪,೬೨೨ ರೈತರು ೧೧.೭೬ ಕೋಟಿ ರೂಪಾಯಿಗಳ ಬ್ಯಾಂಕ್ ಸಾಲವನ್ನು ಪಿ.ಸಿ.ಎ.ಆರ್.ಡಿ ಬ್ಯಾಂಕ್ ಮೂಲಕ ಕೃಷಿ ಸಲುವಾಗಿ ಕೊಳವೆ ಬಾವಿ ಮತ್ತು ತೆರೆದ ಬಾವಿ ನಿರ್ಮಿಸಲು ಪಡೆದಿರುವುದನ್ನು ಸರ್ಕಾರವು ಸದರಿ ಸ್ಥಳದಲ್ಲಿ ನೀರು ಬರದೆ ಇರುವ ಕಾರಣಕ್ಕಾಗಿ ಸಾಲವನ್ನು ಮನ್ನಾ ಮಾಡಿದೆ.

ಸ್ವ-ಸಹಾಯ ಗುಂಪು
ಈ ಹಿಂದೆ ಸಹಕಾರ ಸಂಘಗಳಿಂದ ಮಹಿಳೆಯರ ಸ್ವ-ಸಹಾಯ ಗುಂಪುಗಳಿಗೆ ಈ ಹಿಂದೆ ಶೇಕಡಾ ೪ ಬಡ್ಡಿಯಂತೆ ನೀಡಲಾಗುತ್ತಿದ್ದುದ್ದನ್ನು ಕರ್ನಾಟಕ ಸರ್ಕಾರವು ಬಡ್ಡಿ ರಹಿತ ಸಾಲವನ್ನಾಗಿ ಮಾರ್ಪಡಿಸಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
ಗದಗ ಜಿಲ್ಲೆಯಲ್ಲಿ ಈರುಳ್ಳಿ ಗೋದಾಮಿನ ಸ್ಥಾಪನೆ, ಜಾನುವಾರು ಮಾರುಕಟ್ಟೆಗಳಲ್ಲಿ ಆಧುನಿಕ ಸೌಲಭ್ಯಗಳಾದ ಕ್ರೇಟ್, ಟ್ರಾಲಿ ಮತ್ತು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ತರಕಾರಿ ಮಾರುಕಟ್ಟೆಗೆ ಒದಗಿಸುವ ವಿಶೇಷವಾದ ಕಾರ್ಯಕ್ರಮವನ್ನು ಒಟ್ಟು ೧೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಾಡಲಾಗಿದೆ.

ಪಿ.ಒ.ಎಸ್. ಯಂತ್ರಗಳು
ಜಿಲ್ಲಾ ಸಹಕಾರ ಬ್ಯಾಂಕ್ (ಡಿಸಿಸಿ) ಮೈಕ್ರೊ ಎಟಿಎಂ ಮತ್ತು ಪಿಒಎಸ್ ಯಂತ್ರಗಳನ್ನು ನಬಾರ್ಡ್ ಸಹಾಯದಿಂದ ಅಂತರ್ಜಾಲದ ಸೌಲಭ್ಯ ಹೊಂದಿರುವ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ರಾಜ್ಯ ಸರ್ಕಾರವು ಶೇ ೨೫ರಷ್ಟು ಸಹಾಯವನ್ನು ನೀಡುವ ಯೋಜನೆಯನ್ನು ಹೊಂದಿದೆ.

ಪ್ರಾಥಮಿಕ ಕೃಷಿ ಸಹಕಾರ ಸಂಘಗಳು (ಪಿ.ಎ.ಸಿ.ಎಸ್)
ಸಹಕಾರ ಇಲಾಖೆಯು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಸ್ಥಾಪನೆಯನ್ನು ಆರ್ಥಿಕವಾಗಿ ಕಾರ್ಯಸಾಧ್ಯವಾಗುವ ಪ್ರತಿ ಗ್ರಾಮಪಂಚಾಯತಿಯಲ್ಲಿ ಪ್ರಾರಂಭಿಸಿದೆ.

ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ
ಇಲಾಖೆಯು ಸಹಕಾರ ಸಂಘದಲ್ಲಿ ಹೊಸ ತಂತ್ರಜ್ಞಾನದಿಂದ ದಕ್ಷ ಮತ್ತು ಪರಿಣಾಮಕಾರಿ ಆಡಳಿತಕ್ರಮವನ್ನು ತರುವ ನಿಟ್ಟಿನಲ್ಲಿ ಗಣಕಯಂತ್ರವನ್ನು ಅಳವಡಿಸಿದೆ.

image2-1

ರಾಜ್ಯ ಮಟ್ಟದ ಸಹಕಾರ ಒಕ್ಕೂಟಗಳ ಕಾರ್ಯನಿರ್ವಹಣೆ

ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್
ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಮಾರ್ಚ್ ೨೦೧೭ರ ಪ್ರಕಾರ ೧,೦೦೯.೮೩ ಕೋಟಿ ರೂಪಾಯಿಗಳ ಸ್ವಯಂ ನಿಧಿ, ೧೬,೦೭೭.೮೪ ಕೋಟಿ ರೂಪಾಯಿಗಳ ಕಾರ್ಯವಹಿ ಬಂಡವಾಳ ಮತ್ತು ೭,೩೬೭ ಕೋಟಿ ರೂಪಾಯಿಗಳ ಠೇವಣಿಯನ್ನು ಹೊಂದಿರುತ್ತದೆ.
ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತ:
ದಿನಾಂಕ 31-03-2017 ರ ಪ್ರಕಾರ ಸಹಕಾರ ಬ್ಯಾಂಕ್ 63.92 ಕೋಟಿ ರೂಪಾಯಿಗಳ ಶೇರು ಬಂಡವಾಳವನ್ನು ಹೊಂದಿದ್ದು ಇದರಲ್ಲಿ ಸರ್ಕಾರದ ಶೇರು 4.45 ಕೋಟಿಗಳಾಗಿದ್ದು 2315.11 ಕೋಟಿ ರೂಪಾಯಿಗಳ ಕಾರ್ಯವಹಿ ಬಂಡವಾಳವನ್ನು ಹೊಂದಿದೆ.

ನಗರ ಸಹಕಾರ ಬ್ಯಾಂಕ್
ನಗರ ಸಹಕಾರ ಬ್ಯಾಂಕ್ ವಲಯವು ದೇಶದಲ್ಲೇ ಮೂರನೇ ಸ್ಥಾನವನ್ನು ಪಡೆದಿದೆ. ಇದು ಕೃಷಿಯನ್ನು ಬಿಟ್ಟು ಇತರೆ ವಲಯದ ಅಗತ್ಯಗಳಿಗೆ ಸಾಲವನ್ನು ನೀಡುತ್ತದೆ. ೩೧-೩-೨೦೧೭ ರಲ್ಲಿ ಒಟ್ಟು ೨೪೮ ನಗರ ಸಹಕಾರ ಬ್ಯಾಂಕ್‌ಗಳು ೨೪.೩೬ ಲಕ್ಷ ಸದಸ್ಯರು, ೧೦೭೩.೮೦ ಕೋಟಿ ರೂಪಾಯಿಗಳ ಶೇರು ಬಂಡವಾಳ ಮತ್ತು ೩೪೮೯೨.೬೨ ಕೋಟಿ ರೂಪಾಯಿಗಳ ಬಂಡವಾಳವನ್ನು ಹೊಂದಿದೆ.

ಮಹಿಳಾ ನಗರ ಸಹಕಾರ ಬ್ಯಾಂಕ್
ಮಹಿಳಾ ಸಹಕಾರ ಬ್ಯಾಂಕ್‌ನ ಸಂಘಟನೆ ಮತ್ತು ಅಭಿವೃದ್ಧಿಯು ಭಾರತದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ಒಟ್ಟು 28 ನಗರ ಸಹಕಾರ ಬ್ಯಾಂಕ್‌ನ್ನು ಪ್ರತ್ಯೇಕವಾಗಿ ಮಹಿಳೆಯರಿಗಾಗಿಯೇ ಸಂಘಟಿಸಲಾಗಿದೆ.

ಕರ್ನಾಟಕ ರಾಜ್ಯ ನಗರ ಸಹಕಾರ ಬ್ಯಾಂಕ್ ಒಕ್ಕೂಟ ನಿ.
ಈ ಒಕ್ಕೂಟವು ೧೯೬೫ನೇ ವರ್ಷದಲ್ಲಿ ನೊಂದಣಿಯಾಗಿದೆ. ಪ್ರಾಥಮಿಕ ನಗರ ಸಹಕಾರ ಬ್ಯಾಂಕ್ ಸದಸ್ಯತ್ವದಿಂದ ಸಂಸ್ಥೆಯ ನೆರವನ್ನು ಸದಸ್ಯರಿಗೆ ನೀಡುತ್ತಿದೆ. ಇದು ಪ್ರತ್ಯೇಕವಾಗಿ ನಗರ ಬ್ಯಾಂಕ್‌ಗಳಿಗೆ ಸಂಬಂಧಿಸಿದ ವಿವಾದಗಳನ್ನು ಕೇಳುವ ಸಲುವಾಗಿ ಸಹಕಾರ ಸಂಘ ಯು/ಆರ್ ೪೪೧ನ ಎರಡು ಜಂಟಿ ಅಧಿಕಾರಿಗಳನ್ನು ಹೊಂದಿದೆ.

ಕರ್ನಾಟಕ ರಾಜ್ಯ ಶಾಶ್ವತ ಸಹಕಾರ ಸಂಘಗಳ ಒಕ್ಕೂಟ ನಿ.
ಈ ಒಕ್ಕೂಟವು ೭೫೦ ಕೃಷಿರಹಿತ ಶಾಶ್ವತ ಸಹಕಾರ ಸಂಘಗಳ ಸದಸ್ಯರನ್ನು ಹೊಂದಿದೆ. ಈ ಒಕ್ಕೂಟವು ಆದಯ ತೆರಿಗೆ, ಆಡಿಟ್, ಬಾಕಿ ಇರುವ ಸಾಲವನ್ನು ಮರುಪಡಿಯುವಿಕೆಗಾಗಿ ಪ್ರತ್ಯೇಕ ನ್ಯಾಯಾಲಕದ ಸ್ಥಾಪನೆ, ಸದಸ್ಯರ ಠೇವಣಿ ಹಣದ ಸುರಕ್ಷತೆಗಾಗಿ ಕ್ರಮಗಳನ್ನು ಸೂಚಿಸುವ ಅಲ್ಪಾವಧಿ ಕಾರ್ಯಕ್ರಮಗಳನ್ನು ಪ್ರಚೋದಿಸುತ್ತದೆ.

ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಒಕ್ಕೂಟ
ಈ ಒಕ್ಕೂಟವು ರೈತರಿಗೆ ಅಗತ್ಯವಿರುವ ಕೃಷಿಗೆ ಬೇಕಾದ ರಸಗೊಬ್ಬರಗಳು, ಕೀಟನಾಶಕಗಳ ಸಂಗ್ರಹಣೆ ಮತ್ತು ವಿತರಣೆ ಮಾಡುವುದರೊಂದಿಗೆ ಕೃಷಿ ಉತ್ಪನ್ನವನ್ನು ರೈತರಿಂದ ಪಡೆಯುವ ಕಾರ್ಯದಲ್ಲಿ ಭಾಗಿಯಾಗಿದೆ.
ಈ ಒಕ್ಕೂಟವು ೪೮೩ ಸಹಕಾರ ಸಂಘಗಳ ಸದಸ್ಯತ್ವ, ೬೧೯ ಲಕ್ಷ ಶೇರು ಬಂಡವಾಳ, ೯೬೦.೪೯ ಕಾರ್ಯನಿರ್ವಹಣೆ ಬಂಡವಾಳವನ್ನು ಹೊಂದಿದೆ. ರಸಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ೨೩೧.೪೨ ಕೋಟಿ ರೂಪಾಯಿ ಮತ್ತು ಕೃಷಿ ಉತ್ಪನ್ನಗಳ ಖರೀದಿಗೆ ೧೦.೨೫ ಕೋಟಿ ರೂಪಾಯಿ ೨೦೧೬-೧೭ನೇ ವರ್ಷದಲ್ಲಿ ವಹಿವಾಟಾಗಿದೆ.

ಕೃಷಿ ಉತ್ಪನ್ನಗಳ ಸಹಕಾರ ಮಾರುಕಟ್ಟೆ ಸಂಘಗಳು (ಎಪಿಎಂಸಿ)
ರಾಜ್ಯದಲ್ಲಿ ಒಟ್ಟು ೧೭೯ ಎಪಿಎಂಸಿಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಘಗಳ ಮುಖ್ಯ ಉದ್ದೇಶವೆಂದರೆ ಕೃಷಿ ಉತ್ಪನ್ನಗಳನ್ನು ರೈತರಿಂದ ಸಂಗ್ರಹಿಸಿ, ಈ ಉತ್ಪನ್ನಗಳ ವ್ಯಾಪಾರವನ್ನು ಸಕ್ರಿಯಗೊಳಿಸಿ ಉತ್ತಮವಾದ ಆದಾಯವನ್ನು ರೈತರಿಗೆ ನೀಡುವುದಾಗಿದೆ.
೨೦೧೬-೧೭ನೇ ವರ್ಷದ ಅಂತ್ಯದಲ್ಲಿ ೧೭೯ ಸಹಕಾರಿ ಸಂಘಗಳು ೪೪೫೭ ಸಹಕಾರ ಸಂಘಗಳನ್ನು ಮತ್ತು ೩,೧೯,೩೫೫ ವೈಯಕ್ತಿಕ ಸದಸ್ಯರನ್ನು ಹೊಂದಿವೆ. ಒಟ್ಟು ಶೇರು ಬಂಡವಾಳವು ೩೩.೪ ಕೋಟಿಗಳಾಗಿದ್ದು ಅದರಲ್ಲಿ ಸರ್ಕಾರದ ಶೇರು ಬಂಡವಾಳವು ೧೨೮೨.೦೩ ಲಕ್ಷ ರೂಪಾಯಿಯಾಗಿದ್ದು, ಕಾರ್ಯನಿರ್ವಹಣೆ ಬಂಡವಾಳ ೬೫೪.೩೫ ಕೋಟಿ ಮತ್ತು ವ್ಯವಹಾರಿಕ ವಹಿವಾಟು ೧೩೩೪.೨೮ ಕೋಟಿ ರೂಪಾಯಿ ಆಗಿದೆ.

ಸಂಸ್ಕರಣ ಸಹಕಾರ ಸಂಘಗಳು
ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಾದ ಅಕ್ಕಿ, ಬೇಳೆ, ಎಣ್ಣೆ, ಹತ್ತಿ, ಕಾಫಿ, ಅಡಿಕೆ ಹಾಗೂ ಹಣ್ಣುಗಳನ್ನು ಈ ಕೆಳಗಿನ ಸಂಸ್ಕರಣಾ ಘಟಕಗಳನ್ನು ಸಹಕಾರ ಸಂಘಗಳಲ್ಲಿ ಸ್ಥಾಪಿಸಲಾಗಿದೆ.
• ಕ್ಯಾಂಪ್ಕೊ ಲಿ., ಮಂಗಳೂರು (ಅಡಿಕೆ ಮತ್ತು ಕೊಕೊ ಸಂಸ್ಕರಣಾ ಮಾರುಕಟ್ಟೆ ಸಹಕಾರ ಸಂಘ)
• ಕೊಮಾರ್ಕ್ ಲಿ., (ಕಾಫಿ) ಹಾಸನ
• ರಬ್ಬರ್ ಮಾರುಕಟ್ಟೆ ಮತ್ತು ಸಂಸ್ಕರಣ ಸಹಕಾರ ಸಂಘ ಲಿ., ಮಂಗಳೂರು ಬಹುರಾಜ್ಯ ಸಹಕಾರ ಸಂಘ ಕಾಯಿದೆ ಅಡಿಯಲ್ಲಿ ನೊಂದಣಿಯಾಗಿದೆ.

ಕರ್ನಾಟಕ ಸಹಕಾರ ಎಣ್ಣೆಕಾಳು ಬೆಳೆಗಾರರ ಒಕ್ಕೂಟ
ಈ ಒಕ್ಕೂಟವು ಚಿತ್ರದುರ್ಗ, ಹುಬ್ಬಳಿ, ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ಸ್ಥಳೀಯ ಎಣ್ಣೆಕಾಳು ಬೆಳೆಗಾರರ ಸಹಕಾರ ಸಂಘ ಮತ್ತು ಎನ್.ಡಿ.ಡಿ.ಬಿ. ಎಂಬ ನಾಲ್ಕು ಸದಸ್ಯರನ್ನು ಹೊಂದಿದೆ,
ಸ್ಥಳೀಯ ಸಂಘವು ೧.೪೬ ಲಕ್ಷ ರೈತರನ್ನೊಳಗೊಂಡಂತೆ ಒಟ್ಟು ೩೫೨ ಎಣ್ಣೆಕಾಳು ಬೆಳೆಗಾರರ ಸಂಘದ ಸದಸ್ಯತ್ವವನ್ನು ಹೊಂದಿದೆ. ೩೧-೩-೨೦೧೭ರಂತೆ ಒಕ್ಕೂಟವು ೧೭೯.೧೨ ಲಕ್ಷ ಶೇರು ಬಂಡವಾಳ ಮತ್ತು ೧೭೯.೧೨ ಲಕ್ಷ ಕಾರ್ಯನಿರ್ವಹಕ ಬಂಡವಾಳವನ್ನು ಹೊಂದಿದೆ. ೨೦೧೬-೧೭ನೇ ವರ್ಷದಲ್ಲಿ ೨೭೧.೬೧ ಕೋಟಿ ರೂಪಾಯಿಗಳ ವ್ಯವಹಾರಿಕ ವಹಿವಾಟವನ್ನು ಮಾಡಿದ್ದು ೩.೫೭ ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿದೆ.

ತೋಟಗಾರಿಕ ಉತ್ಪಾದನೆ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣ ಸಂಘ ಲಿ., (ಹಾಪ್‌ಕಾಮ್ಸ್)
ಪ್ರಸ್ತುತ ಹಾಪ್‌ಕಾಮ್ಸ್ ೨೫೧ ಮಾರಾಟ ಕೇಂದ್ರ ಹಾಗೂ ೭ ಸಂಗ್ರಹಣ ಕೇಂದ್ರವನ್ನು ಹೊಂದಿದೆ. ಇದು ಉತ್ಪಾದಕರಿಂದ ಸಮಂಜಸವಾದ ಬೆಲೆಗೆ ತೋಟಕಾರಿಕ ಉತ್ಪನ್ನವನ್ನು ಖರೀದಿ ಮಾಡಿ ವರ್ಗೀಕರಿಸಿ ಗ್ರಾಹಕರಿಗಾಗಿ ಸಮಂಜಸವಾದ ಬೆಲೆಗೆ ನೀಡುತ್ತದೆ. ೩೧-೩-೨೦೧೭ರಂತೆ ಸಂಘವು ೬,೦೯೭ ’ಎ’ ವರ್ಗದ ಸದಸ್ಯರು, ’ಬಿ’ ವರ್ಗ (ಸರ್ಕಾರಿ ಬಂಡವಾಳ )-೧ ಮತ್ತು ೪೦೯ ’ಚ’ ವರ್ಗದ ಸದಸ್ಯರನ್ನು , ೨.೨೭ ಕೋಟಿ ರೂಪಾಯಿಗಳ ಶೇರು ಬಂಡವಾಳ, ೨.೨೭ ಕೋಟಿ ರೂಪಾಯಿಗಳ ವ್ಯವಹಾರಿಕ ಬಂಡವಾಳವನ್ನು ಹೊಂದಿದ್ದು ಒಟ್ಟು ೧.೦೭ ಕೋಟಿರೂಪಾಯಿಗಳ ನಿವ್ವಳ ಲಾಭವನ್ನು ಪಡೆದಿದೆ.

ಕರ್ನಾಟಕ ರಾಜ್ಯ ಗ್ರಾಹಕರ ಸಹಕಾರ ಒಕ್ಕೂಟ
ಈ ಒಕ್ಕೂಟವು ಬೆಂಗಳೂರಿನಲ್ಲಿ ೪ ಜನತಾ ಬಜಾರ್‌ನ್ನು ಹಾಗೂ ೯ ಉಪಶಾಖೆಯನ್ನು ಇತರೆ ಜಿಲ್ಲೆಗಳಲ್ಲಿ ಹೊಂದಿದೆ. ಈ ಒಕ್ಕೂಟವು ೨.೬೯ ಕೋಟಿಗಳ ಶೇರು ಬಂಡವಾಳ, ೧೭.೧೬ ಕೋಟಿ ರೂಪಾಯಿಗಳ ಕಾರ್ಯನಿರ್ವಾಹಕ ಬಂಡವಾಳ ಮತ್ತು ೨೧೫.೦೦ ಕೋಟಿ ರೂಪಾಯಿಗಳ ವಹಿವಾಟು ಬಂಡವಾಳವನ್ನು ಹೊಂದಿದೆ. ೨೦೧೬-೧೭ ನೇ ಆರ್ಥಿಕ ವರ್ಷದಲ್ಲಿ ೪.೨೫ ಕೋಟಿ ರೂಪಾಯಿಗಳ ಲಾಭವನ್ನು ಗಳಿಸಿದೆ.

ಜಿಲ್ಲಾ ಕೇಂದ್ರ ಸಹಕಾರಿ ಸಗಟು ಅಂಗಡಿ ಕೇಂದ್ರಗಳು
ರಾಜ್ಯದಲ್ಲಿ ಒಟ್ಟು ೨೬ ಕಾರ್ಯನಿರ್ವಹಿಸುತ್ತಿರುವ ಸಗಟು ಅಂಗಡಿಗಳ ಜಿಲ್ಲಾ ಕೇಂದ್ರ್ ಸಹಕಾರಗಳಿವೆ. ಇದು ೪೪೦೪೧ ವೈಯಕ್ತಿಕ ಸದಸ್ಯರನ್ನು, ೨೩೭೫ ಸಹಕಾರ ಸಂಘಗಳ ಸದಸ್ಯರನ್ನು, ೩೦೧.೨೨ ಲಕ್ಷ ಶೇರು ಬಂಡವಾಳ, ೨೬.೩೯ ಕೋಟಿ ರೂಪಾಯಿಗಳ ಕಾರ್ಯನಿರ್ವಹಕ ಬಂಡವಾಳವನ್ನು ಹೊಂದಿದೆ. ಈ ಅಂಗಡಿಗಳು ೧೦೦.೨೭ ಕೋಟಿ ರೂಪಾಹಿಗಳ ವ್ಯವಹಾರ ವಹಿವಾಟನ್ನು ಮಾಡಿದೆ.

ಪ್ರಾಥಮಿಕ ಗ್ರಾಹಕರ ಸಹಕಾರ ಸಂಘಗಳು
ರಾಜ್ಯದಲ್ಲಿ ಒಟ್ಟು ೧,೨೨೩ ಪ್ರಾಥಮಿಕ ಗ್ರಾಹಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು ೪,೫೨,೧೪೬ ಸದಸ್ಯರನ್ನು ಹೊಂದಿದೆ. ೩೧-೩-೨೦೧೭ರಂತೆ ಈ ಸಂಘಗಳು ೧೯.೩೫ ಕೋಟಿ ರೂಪಾಯಿಗಳ ಶೇರು ಬಂಡವಾಳ ಮತ್ತು ೭೧.೩೮ ಕೋಟಿ ರೂಪಾಯಿಗಳ ಕಾರ್ಯನಿರ್ವಾಹಕ ಬಂಡವಾಳವನ್ನು ಹೊಂದಿದೆ. ಈ ಸಂಘಗಳ ವ್ಯವಹಾರಿಕ ವಹಿವಾಟು ೧೦೭.೯೯ ಕೋಟಿ ರೂಪಾಯಿಗಳಾಗಿದ್ದು ೬೩ ಸಂಘಗಳು ೬.೨೫ ಕೋಟಿ ರೂಪಾಯಿಗಳ ಲಾಭವನ್ನು ಪಡೆದಿವೆ.

image5

ಕರ್ನಾಟಕ ರಾಜ್ಯ ಸಹಕಾರ ಹಾಲು ಒಕ್ಕೂಟ ನಿ.
ಕೆ.ಎಂ.ಎಫ್ ರಾಜ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ೧೪ ಜಿಲ್ಲಾ ಹಾಲು ಸಹಕಾರ ಸಂಘಗಳ ಮೂಲಕ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್.ಡಿ.ಡಿಬಿ) ಸಹಯೋಗದೊಂದಿಗೆ ಗ್ರಾಮೀಣ ಹಾಲು ಉತ್ಪಾದಕರ ಜೀವನವನ್ನು ಸಮೃದ್ಧಿಗೊಳಿಸುವ ಉತ್ತರಾಧಿಕಾರದಿಂದ ಡೈರಿ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಿದೆ.
ಮಾರ್ಚ್ ೧೦೧೭ರಂತೆ ಸುಮಾರು ೧೫,೧೮೮ ಡೈರಿ ಸಹಕಾರ ಸಂಘಗಳನ್ನು (ಡಿ.ಸಿ.ಎಸ್) ಸಂಘಟಿಸಿದ್ದು ಇದು ೧೭೨ ತಾಲ್ಲೂಕುಗಳ ೨೧,೮೪೭ ಹಳ್ಳಿಗಳನ್ನೊಳಗೊಂಡ ೧೪ ಜಿಲ್ಲಾ ಸಹಕಾರ ಹಾಲು ಒಕ್ಕೂಟವನ್ನು ಸಂಘಟಿಸಿದ್ದು ಶೇ ೯೯ ಒಕ್ಕೂಟಗಳು ಲಾಭವನ್ನು ಪಡೆಯುತ್ತಿವೆ. ಡೈರಿ ಸಹಕಾರ ಸಂಘದಲ್ಲಿ ೨೪.೦೦ ಲಕ್ಷ ರೈತರು ಸದಸ್ಯರಿದ್ದು ಇದರಲ್ಲಿ ೮.೪೮ ಲಕ್ಷ ಸದಸ್ಯರು ಮಹಿಳೆಯರಾಗಿದ್ದಾರೆ.
ಈ ಒಕ್ಕೂಟವು ಸಹಕಾರ ಸಂಘಗಳಿಂದ ಹಾಲು ಸಂಗ್ರಹಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನವನ್ನು ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನವನ್ನು ಪಡೆದಿದೆ.
ಕೆ.ಎಂ.ಎಫ್ ಕ್ಷೀರಭಾಗ್ಯ, ಕ್ಷೀರ ಸಂಜೀವಿನಿ, ಸ್ಥಳೀಯ ತಳಿ ಹಾಲು ಸಂಗ್ರಹಣೆ ಮತ್ತು ಮಾರಟ ಇತ್ಯಾದಿ ಸಕ್ರಿಯವಾಗಿ ಜಾರಿಗೊಳಿಸಿದ ಯೋಜನೆಗಳಲ್ಲಿ ಪಾಲ್ಗೊಂಡಿದೆ.

ಕರ್ನಾಟಕ ರಾಜ್ಯ ಸಹಕಾರ ವಸತಿ ಒಕ್ಕೂಟ ಲಿ.
ಈ ಒಕ್ಕೂಟವು ವಸತಿ ನಿರ್ಮಾಣ ಸಹಕಾರ ಸಂಘಗಳಿಗೆ ಮನೆ ಕಟ್ಟಲು / ಖರೀದಿಸಲು ಮತ್ತು ವಿನ್ಯಾಸ ನಿರ್ಮಾಣಕ್ಕಾಗಿ ಸಾಲ ನೀಡುವ ಮೂಲಕ ಸಹಾಯ ಮಾಡುತ್ತಿದೆ. ೩೧-೦೩-೨೦೧೭ರಂತೆ ಒಕ್ಕೂಟವು ೫೫೭.೬೧ ಲಕ್ಷ ಶೇರು ಬಂಡವಾಳ ಮತ್ತು ೮೬೬೮.೨೫ ಲಕ್ಷ ಕಾರ್ಯನಿರ್ವಾಹಕ ಬಂಡವಾಳವನ್ನು ಹೊಂದಿದೆ. ೨೦೧೬-೧೭ನೇ ಆರ್ಥಿಕ ವರ್ಷದಲ್ಲಿ ಒಕ್ಕೂಟವು ೩೩೧.೪೮ ಲಕ್ಷ ರೂಪಾಯಿಗಳ ಮುಂದುವರಿದ ಸಾಲವನ್ನು ವಸತಿ ನಿರ್ಮಾಣ ಸಹಕಾರ ಸಂಘಗಳಿಗೆ ಮತ್ತು ನೇರ ಸದಸ್ಯರಿಗೆ ಮನೆ ನಿರ್ಮಾಣಕ್ಕಾಗಿ ನೀಡಿದೆ.

Namma-Karntaka-Co-operation-Department

ಸಾರಿಗೆ ಸಹಕಾರ ಸಂಘ
ಕೊಪ್ಪ ಸಾರಿಗೆ ಸಹಕಾರ ಸಂಘವು ೭೬ ಬಸ್ ಹಾಗೂ ೨೯೫ ವೈಯಕ್ತಿಕ ಸದಸ್ಯರನ್ನೊಳಗೊಂಡಿದೆ. ಈ ಸಹಕಾರವು ಚಿಕ್ಕಮಗಳೂರಿನ ೬೨% ಗ್ರಾಮೀಣ ಪ್ರದೇಶದ ಮಾರ್ಗವನ್ನು ಒಳಗೊಂಡಿದೆ.

ಮೀನುಗಾರಿಕಾ ಸಹಕಾರ ಸಂಘಗಳು
ರಾಜ್ಯದಲ್ಲಿ ಒಟ್ಟು ೬೯೫ ಮೀನು ಸಹಕಾರ ಸಂಘಗಳು ನೊಂದಣಿಯಾಗಿವೆ. ಕರ್ನಾಟಕ ರಾಜ್ಯ ಮೀನು ಸಹಕಾರ ಒಕ್ಕೂಟವು ಸಂಪೂರ್ಣ ರಾಜ್ಯದ ಅಧಿಕಾರ ವ್ಯಾಪ್ತಿಯನ್ನು ಯೊಂದಿಗೆ ೨೭೮ ಮೀನು ಸಹಕಾರ ಸಂಘಗಳ ಸದಸ್ಯತ್ವವನ್ನು ಹೊಂದಿದೆ.

ಕೈಗಾರಿಕಾ ಸಹಕಾರ ಸಂಘಗಳು
ರಾಜ್ಯದಲ್ಲಿ ಒಟ್ಟು ೮೧೬ ಕೈಗಾರಿಕಾ ಸಹಕಾರ ಸಂಘಗಳಿದ್ದು ೨.೧೬ಲಕ್ಷ ಸದಸ್ಯರನ್ನು ಹಾಗೂ ೩೩,೬೯೭.೨೧ ಲಕ್ಷ ರೂಪಾಯಿಗಳ ನೈಜ ಬಂಡವಾಳವನ್ನು ಹೊಂದಿದೆ.

ದೊಡ್ಡ ಪ್ರಮಾಣದ ಬಹು ಉದ್ದೇಶಿತ ಆದಿವಾಸಿ ಸಹಕಾರ ಸಂಘ (ಎಲ್.ಎ.ಎಂ.ಪಿ.ಎಸ್)
ರಾಜ್ಯದಲ್ಲಿ ಒಟ್ಟು ೨೪ ದೊಡ್ಡ ಪ್ರಮಾಣದ ಬಹುಉದ್ದೇಶಿತ ಆದಿವಾಸಿ ಸಹಕಾರ ಸಂಘಗಳ ಕಾರ್ಯನಿರ್ವಹಿಸುತ್ತಿವೆ. ಈ ಸಹಕಾರ ಸಂಘಗಳು ಆದಿವಾಸಿಗಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕಾರ್ಯನಿರ್ವಹಿಸುತ್ತಿವೆ.

ಸಾಲದಾತರು / ಪಾನ್ ಬ್ರೋಕರ್ / ಚಿಟ್ ಫಂಡ್ಸ್
೩೧-೩-೨೦೧೭ರಂತೆ ರಾಜ್ಯದಲ್ಲಿ ೧೬೬೭೨ ಸಾಲ ನೀಡುವ / ಹಣಕಾಸು ಸಂಸ್ಥೆಗಳು, ೮೭೩೪ ಪಾನ್ ಬ್ರೋಕರ್ ಗಳು ಹಾಗೂ ೧೨೨೩ ಚಿಟ್ ಕಂಪನಿಗಳಿವೆ. ೨೦೧೬-೧೭ನೇ ಆರ್ಥಿಕ ವರ್ಷದಲ್ಲಿ ೧೮೦.೨೯ ಲಕ್ಷ ರೂಪಾಯಿಗಳ ಪರಾವನೆ ಶುಲ್ಕವನ್ನು ಹಣಕಾಸು ಸಂಸ್ಥೆ, ಪಾನ್ ಬ್ರೋಕರ್ ಗಳಿಂದ ಹಾಗೂ ೭೩.೦೦ ಲಕ್ಷ ರೂಪಾಯಿಗಳನ್ನು ಚಿಟ್ ಕಂಪನಿಗಳಿಂದ ಸಂಗ್ರಹಿಸಿದೆ.

ಇ-ಅಂಚೆ
ರಾಜ್ಯದಲ್ಲಿ ಒಟ್ಟು ೧೦೨೩ ಸಹಕಾರ ಸಂಘಗಳು ಇ-ಅಂಚೆ ಸೌಲಭ್ಯವನ್ನೂ ಸಹ ನೀಡುತ್ತಿವೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-co-operation