/ delivered as promised

ನಡೆದಿದ್ದೇವೆ: ಆಹಾರ ಮತ್ತು ನೀರಿನ ಭದ್ರತೆ, ಉದ್ಯೋಗ,ವಿದ್ಯುತ್ ಹಾಗೂ ರೈತರ ಕಲ್ಯಾಣ

2013ರ ಚುನಾವಣಾ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಮೇಲೆ 155 ಭರವಸೆಗಳನ್ನು ಈಡೇರಿಸಿದೆ. ಈಡೇರಿಸಲಾದ ಭರವಸೆಗಳ ಸಮಗ್ರ ಚಿತ್ರಣ ಈ ಕೆಳಕಂಡಂತಿದೆ

NS_Sum_Creative-Kan-1-to-4-1

ರೈತರ ಆರ್ಥಿಕ ಸಬಲೀಕರಣ

ನುಡಿದಂತೆ
2 ಲಕ್ಷದ ವರೆಗೆ ರೈತರಿಗೆ ಬಡ್ಡಿರಹಿತ ಸಾಲ ವಿತರಣೆ ಮತ್ತು 3% ದರದಲ್ಲಿ 5 ಲಕ್ಷ ರೂಗಳ ಸಾಲ ವಿತರಣಾ ಸೌಲಭ್ಯ.
ಹೆಚ್ಚುವರಿ ಬಡ್ಡಿ ದರವನ್ನು ಗುರುತಿಸಲ್ಪಟ್ಟ ಸಹಕಾರೀ ಹಣಕಾಸು ಸಂಸ್ಥೆಗಳಿಂದ ಮರುಪಾವತಿಸುವುದು.

ನಡದಿದ್ದೇವೆ
• 0% ಬಡ್ಡಿದರದಲ್ಲಿ 3 ಲಕ್ಷ ರೂಗಳ ವರೆಗೆ ಸಾಲ ನೀಡಲಾಗಿದೆ
• 3% ಬಡ್ಡಿದರದಲ್ಲಿ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು ನೀಡಲಾಗಿದೆ
• ಈವರೆಗೂ 74 ಲಕ್ಷಕ್ಕೂ ಹೆಚ್ಚಿನ ರೈತರು ಇದರ ಪ್ರಯೋಜನ ಪಡೆದಿದ್ದಾರೆ.
• ಕರ್ನಾಟಕ ಸರ್ಕಾರದಿಂದ 8,165 ಕೋಟಿ ರೂಪಾಯಿಗಳಷ್ಟು ರೈತರ ಸಾಲವನ್ನು ಮನ್ನಾ ಮಾಡಲಾಗಿದೆ.

ಕೃಷಿ ಯಂತ್ರಧಾರೆ

ನುಡಿದಂತೆ
ಕನಿಷ್ಠ ವಸ್ತುಗಳಿಂದ ಗರಿಷ್ಠ ಕೃಷಿ ಉತ್ಪಾದನೆಯನ್ನು ಮಾಡುವುದಕ್ಕಾಗಿ ಕರ್ನಾಟಕದ ರೈತರ ಯಾಂತ್ರಿಕ ಮತ್ತು ಆಧುನಿಕ ಕೃಷಿಯನ್ನು ಉತ್ತೇಜಿಸಲು ಅವರಿಗೆ ನೇರವಾಗಿ ಸಬ್ಸಿಡಿಯನ್ನು ತಲುಪುವಂತೆ ಮಾಡುವುದು

ನಡದಿದ್ದೇವೆ
• ಕೃಷಿ ಯಂತ್ರ ಧಾರೆ ಯೋಜನೆಯ ಮೂಲಕ ರೈತರು ಮಾರುಕಟ್ಟೆ ಮೌಲ್ಯಕ್ಕಿಂತ 30% ಕಡಿಮೆ ದರದಲ್ಲಿ ಕೃಷಿ ಉಪಕರಣಗಳನ್ನು ಪಡೆಕೊಳ್ಳುತ್ತಿದ್ದಾರೆ
• ಕರ್ನಾಟಕದ 490 ಹೋಬಳಿಗಳಲ್ಲಿ ಕೃಷಿಯಂತ್ರಧಾರೆ ಕೇಂದ್ರಗಳು ಇವೆ
• ಈ ಯೋಜನೆಯಿಂದಾಗಿ 6,00,000 ಕ್ಕೂ ಹೆಚ್ಚಿನ ರೈತರಿಗೆ ಅನುಕೂಲವಾಗಿದೆ

ಜಲ ಸಮೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ

ನುಡಿದಂತೆ
5 ವರ್ಷಗಳ ಆಡಳಿತಾವಧಿಯಲ್ಲಿ ರಾಜ್ಯದ ಎಲ್ಲಾ ಹಳ್ಳಿಗಳು ಹಾಗೂ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು

ನಡದಿದ್ದೇವೆ
• ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಶುದ್ಧ ನೀರಿನ ಘಟಕಗಳ (ಎಟಿಎಂ) ಸ್ಥಾಪನೆ
• ಕಳೆದ ನಾಲ್ಕು ವರ್ಷಗಳಲ್ಲಿ 9,155 ಶುದ್ಧ ನೀರಿನ ಘಟಕಗಳ ಸ್ಥಾಪನೆ
• ಶುದ್ಧ ನೀರಿನ ಸೌಲಭ್ಯಕ್ಕೆ ಭಾಜನರಾದ 1 ಕೋಟಿ ಜನತೆ
• ಜಲಧಾರ ಯೋಜನೆಯಡಿ ಶುದ್ಧ ನೀರಿನ ಸಂಪರ್ಕ ಪಡೆದ 3,92,055 ಪ.ಜಾತಿ/ಪ.ಪಂಗಡದ ಮನೆಗಳು. ಶೀಘ್ರದಲ್ಲೇ ಸೌಲಭ್ಯ ಪಡೆಯಲಿರುವ 1,07,945 ಕುಟುಂಬಗಳು​

ಶುದ್ಧ ಕುಡಿಯುವ ನೀರು

ನುಡಿದಂತೆ
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವುದು

ನಡದಿದ್ದೇವೆ
• ಎತ್ತಿನ ಹೊಳೆ ಮೂಲಕ 24.01 ಟಿಎಂಸಿ ನೀರನ್ನು 7 ಮಿಲಿಯನ್ ಜನರಿಗೆ ಒದಗಿಸುವುದು. 2018ರ ಏಪ್ರಿಲ್ ವೇಳೆಗೆ 1ನೇ ಹಂತ ಪೂರ್ಣ
• ಕೋರಮಂಗಲ-ಚಲ್ಲಘಟ್ಟ ಯೋಜನೆ ಭಾರತದಲ್ಲೇ ಮೊದಲಾಗಿದ್ದು ರೂ.1280 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನೀರಿನಿಂದ ಸಂಸ್ಕರಿಸಲಾದ 8 ಟಿಎಂಸಿ ನೀರನ್ನು 16 ಟ್ಯಾಂಕ್‍ಗಳಿಗೆ ತುಂಬಲಾಗುವುದು
• ಹೆಬ್ಬಾಳ -ನಾಗವಾರ ವ್ಯಾಲಿ ಮೂಲಕ ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರನ್ನು 65 ಟ್ಯಾಂಕ್ ಮತ್ತು ಕೆರೆಗಳನ್ನು ತುಂಬುವುದು.​

NS_Sum_Creative-Kan-5-to-8-1

ಪಶುಸಂಗೋಪನೆ

ನುಡಿದಂತೆ
"ಪಶುಭಾಗ್ಯ" ಯೋಜನೆಯಡಿ ಪ್ರತಿ ಪಂಚಾಯಿತಿಗೊಂದು ಪಶುವೈದ್ಯ ಆಸ್ಪತ್ರೆ ನಿರ್ಮಿಸುವುದು

ನಡದಿದ್ದೇವೆ
• ಪ್ರತಿ ಪಂಚಾಯಿತಿಯಲ್ಲಿ ಪಶುವೈದ್ಯ ಆಸ್ಪತ್ರೆ ನಿರ್ಮಾಣ
• ಪ.ಜಾತಿ/ಪ.ಪಂಗಡ ಮತ್ತು ಸಣ್ಣ ರೈತರಿಗೆ ಅನುಕ್ರಮವಾಗಿ 50% & 25% ಸಬ್ಸಿಡಿ.ಮಹಿಳೆಯರಿಗೆ 30% ಅನುದಾನ ಮೀಸಲು
• ರೈತರಿಗೆ ಶೂನ್ಯ ಬಡ್ಡಿಯಲ್ಲಿ ರೂ.12 ಲಕ್ಷಗಳವರೆಗೆ ವಾಣಿಜ್ಯ ಸಾಲ ಹಾಗೂ ರೂ.50,000 ರವರೆಗೆ ಅಲ್ಪಾವಧಿ ಸಾಲ
• 27,869 ರೈತರಿಗೆ ರೂ.91 ಕೋಟಿ ಸಾಲ ಮಂಜೂರು​

ವಿದ್ಯುತ್ ಉತ್ಪಾದನೆ & ನವೀಕರಿಸಬಹುದಾದ ಇಂಧನ

ನುಡಿದಂತೆ
• ವಿದ್ಯುತ್ ಉತ್ಪಾದನಾ ಸಾಮಥ್ರ್ಯವನ್ನು 12,000 ಮೆ.ವ್ಯಾ.ಗೆ ಏರಿಸುವುದು(2013-14 ರಿಂದ 2018-19ರವರೆಗೆ) ಹಾಗೂ ಪರ್ಯಾಯ ವಿದ್ಯುತ್ ಯೋಜನೆಗಳ ಸ್ಥಾಪನೆ

ನಡದಿದ್ದೇವೆ
• ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಸಾಧನೆಗೈದಿದ್ದು ಪ್ರಸ್ತುತ 21,993 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿದೆ
• 4,145 ಮೆ.ವ್ಯಾ. ಸಾಮಥ್ರ್ಯದ ವಿದ್ಯುತ್ ನವೀಕರಿಸಬಹುದಾದ ಇಂಧನಗಳಾದ ಪವನ ಹಾಗೂ ಸೌರಶಕ್ತಿಯಿಂದ ಪಡೆಯುತ್ತಿದ್ದೇವೆ
• ಕರ್ನಾಟಕದ ಪಾವಗಡದಲ್ಲಿರುವ ಸೋಲಾರ್ ಪಾರ್ಕ್ (2000 ಮೆ.ವ್ಯಾ.) ವಿಶ್ವದಲ್ಲೇ ಅತ್ಯಂತ ದೊಡ್ಡ ಘಟಕ
• ವಿದ್ಯುತ್ ಪ್ರಸರಣ & ವಿತರಣೆಯನ್ನು ಮೇಲ್ದರ್ಜೆಗೇರಿಸಲು 81 ಹೊಸ ಸಬ್-ಸ್ಟೇಷನ್‍ಗಳ ಸ್ಥಾಪನೆ

ಬಂಡವಾಳ ಹೂಡಿಕೆಸ್ನೇಹಿ ಕರ್ನಾಟಕದ ನಿರ್ಮಾಣ

ನುಡಿದಂತೆ
• ಬಂಡವಾಳ ಹೂಡಲು ಹೂಡಿಕೆದಾರರಲ್ಲಿ ಆಸಕ್ತಿ ಮೂಡಿಸುವುದು
• ಕ್ಷಿಪ್ರಗತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ
• ರೈತರಿಗೆ ಪಾರದರ್ಶಕವಾಗಿ ಭೂ ಪರಿಹಾರ ವಿತರಣೆ
• 2ನೇ ಹಂತದ ನಗರಗಳು & ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಪ್ರೋತ್ಸಾಹ

ನಡೆದಿದ್ದೇವೆ
• ಅಭೂತಪೂರ್ವ ಯಶಸ್ಸು ಕಂಡ ಹೊಸ ಕೈಗಾರಿಕೆ ನೀತಿ-2014-19
• 2013ರಲ್ಲಿ 11ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ನೀತಿಯಿಂದ ಹೂಡಿಕೆ ಆಸಕ್ತಿಯಲ್ಲಿ ದೇಶದಲ್ಲೇ ಮೊದಲ ರಾಜ್ಯ ಹಾಗೂ ಸತತ 2ನೇ ಬಾರಿಗೆ ಪ್ರಥಮ ಸ್ಥಾನಕ್ಕೆ ಭಾಜನ
• "ಇನ್ವೆಸ್ಟ್ ಕರ್ನಾಟಕ" ಕ್ಕೆ ಭಾರತದಾದ್ಯಂತ ಪ್ರಶಂಸೆ
• 2013-17ರವರೆಗೆ ಕರ್ನಾಟಕದಲ್ಲಿ 13.91 ಲಕ್ಷ ಹೊಸ ಉದ್ಯೋಗ ಸೃಷ್ಟಿ

ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ

ನುಡಿದಂತೆ
• 7ನೇ ತರಗತಿಯವರೆಗೆ ಕನ್ನಡ ಕಲಿಯುವುದು ಕಡ್ಡಾಯ
• 1ನೇ ತರಗತಿಯಿಂದಲೇ ಇಂಗ್ಲಿಷ್ ಭಾಷೆ ಕಲಿಕೆಗೆ ಅವಕಾಶ

ನಡೆದಿದ್ದೇವೆ
• ಶಿಕ್ಷಕರು ಇಂಗ್ಲಿಷ್ ತರಬೇತಿ ಶಿಬಿರದಲ್ಲಿ 30 ದಿನಗಳ ತರಬೇತಿಯನ್ನು ಪಡೆದಿದ್ದು ಇಂಗ್ಲಿಷ್‍ನ್ನು ಒಂದು ಭಾಷೆಯಾಗಿ ಕಲಿಯಲು ಅವಕಾಶ
• ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 10ನೇ ತರಗತಿವರೆಗೆ ಕನ್ನಡ ಕಲಿಕೆ ಕಡ್ಡಾಯ

NS_Sum_Creative-Kan-9-to-12-1

"ಕ್ಷೀರಭಾಗ್ಯ" ದಡಿ ಮಕ್ಕಳಿಗೆ ಪೌಷ್ಟಿಕ ಹಾಲು

ನುಡಿದಂತೆ
• ಶಾಲೆಗಳು ಮತ್ತು ಅಂಗನವಾಡಿಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ಹಾಲು ವಿತರಿಸುವುದು

ನಡೆದಿದ್ದೇವೆ
• "ಕ್ಷೀರಭಾಗ್ಯ"ದಡಿ 1.05 ಕೋಟಿ ಮಕ್ಕಳಿಗೆ ಹಾಲು ವಿತರಣೆ
• ವಾರಕ್ಕೆ 5 ಬಾರಿ ಶಾಲೆಗಳು ಮತ್ತು ಅಂಗನವಾಡಿಗಳ ಮಕ್ಕಳಿಗೆ 150 ಮಿ.ಲೀ. ಪೌಷ್ಟಿಕ ಹಾಲು ವಿತರಣೆ
• 2016-17ರ ಬೇಸಿಗೆ ರಜೆಗೂ ವಿಸ್ತರಣೆಯಾದ ಮಧ್ಯಾಹ್ನದ ಬಿಸಿಯೂಟ ಯೋಜನೆ. ಫಲಾನುಭವಿಗಳಾದ 27 ಲಕ್ಷ ಮಕ್ಕಳು

ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ ಸೂಪರ್ ಸ್ಪೆಷಾಲಲಿಟಿ ಆಸ್ಪತ್ರೆಗಳು

ನುಡಿದಂತೆ
• ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು

ನಡೆದಿದ್ದೇವೆ
• ಬೀದರ್, ಕಲಬುರಗಿ, ಕಾರವಾರ, ಕೊಡಗು, ಚಾಮರಾಜನಗರ ಮತ್ತು ಕೊಪ್ಪಳದಲ್ಲಿ 6 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯಾಗಿದೆ.
• ಪ್ರಗತಿಯಲ್ಲಿರುವ ಚಿತ್ರದುರ್ಗ, ಬಾಗಲಕೋಟೆ, ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನ 6 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಕಾಮಗಾರಿ

ಪ್ರತಿ ಕಂದಾಯ ವಲಯಕ್ಕೊಂದು ಸೂಪರ್ ಸ್ಪೆಷಾಲಲಿಟಿ ಆಸ್ಪತ್ರೆ

ನುಡಿದಂತೆ
• ಕ್ಯಾನ್ಸರ್, ನರಸಂಬಂಧಿ, ಮಾನಸಿಕ ಆರೋಗ್ಯ ಮತ್ತು ಮೂತ್ರಪಿಂಡ ಸಮಸ್ಯೆಗಳ ಸೂಕ್ತ ಚಿಕಿತ್ಸೆಗೆ ಪ್ರತಿ ಕಂದಾಯ ವಲಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ

ನಡೆದಿದ್ದೇವೆ
• ಕಲಬುರಗಿ ಮತ್ತು ಮಂಡ್ಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ
• ರೂ.120 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿದ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ. ಪ್ರಸಕ್ತ ಸಾಲಿನಿಂದ ಕಾರ್ಯ ನಿರ್ವಹಿಸಲಿದೆ
• ಮೈಸೂರಿನಲ್ಲಿ ಶೀಘ್ರದಲ್ಲೇ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಕಾಮಗಾರಿ ಪೂರ್ಣ. ಕಲಬುರಗಿಯಲ್ಲಿ ಕಾರ್ಯಾಚರಣೆಯಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆ
• ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಾರ್ಯಾಚರಣೆಯಲ್ಲಿರುವ 210 ಬೆಡ್ ಸಾಮಥ್ರ್ಯದ ಅಪಘಾತ ಚಿಕಿತ್ಸಾ ಕೇಂದ್ರ
• ಮೈಸೂರು ಮತ್ತು ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಅಪಘಾತ ಚಿಕಿತ್ಸಾ ಕೇಂದ್ರಗಳು

ಅನ್ನ ಭಾಗ್ಯ ಯೋಜನೆ ಮೂಲಕ ಆಹಾರ ಭದ್ರತೆ

ನುಡಿದಂತೆ
• ಕರ್ನಾಟಕದಲ್ಲಿ ಆಹಾರ ಭದ್ರತೆ ಕಾಯ್ದೆಯ ಪೂರ್ಣ ಅನುಷ್ಠಾನ. ಸಾರ್ವಜನಿಕ ವಿತರಣಾ ಪದ್ಧತಿಯ ಮೂಲಕ ಸಮರ್ಪಕವಾಗಿ ಆಹಾರ ಸಾಮಗ್ರಿಗಳನ್ನು ವಿತರಿಸುವುದು
• ಬಿಪಿಎಲ್ ಕುಟುಂಬಗಳಿಗೆ 1 ಕೆಜಿ ಅಕ್ಕಿಗೆ 1 ರೂ. ಬೆಲೆಯಂತೆ 30 ಕೆಜಿ ಅಕ್ಕಿ ವಿತರಿಸುವುದು
• ಸಾರ್ವಜನಿಕ ವಿತರಣಾ ಪದ್ಧತಿಯ ಮೂಲಕ ಬೇಳೆ ವಿತರಿಸುವುದು

ನಡದಿದ್ದೇವೆ
• ಅನ್ನಭಾಗ್ಯ ಯೋಜನೆಯಡಿ 1.08 ಬಿಪಿಎಲ್ ಕುಟುಂಬಗಳಿಗೆ ಆಹಾರ ಭದ್ರತೆ ನೀಡಲಾಗಿದ್ದು, 4 ಕೋಟಿ ಜನರು ಫಲಾನುಭವಿಗಳಾಗಿದ್ದಾರೆ
#HungerFreeKarnataka
• ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ ತಲಾ 7 ಕೆಜಿ ಅಕ್ಕಿ ಹಾಗೂ 1 ಕೆಜಿ ಗೋದಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ
• ರಿಯಾಯಿತಿ ದರ ರೂ.25ಕ್ಕೆ 1 ಲೀ. ಅಡುಗೆ ಎಣ್ಣೆ ಹಾಗೂ ರೂ.2ಕ್ಕೆ ಒಂದು ಪ್ಯಾಕೆಟ್ ಅಯೋಡಿನ್‍ಯುಕ್ತ ಉಪ್ಪು ನೀಡಲಾಗಿತ್ತಿದೆ.
• 2017ರ ಫೆಬ್ರವರಿಯಿಂದ ಸಾರ್ವಜನಿಕ ವಿತರಣಾ ಪದ್ಧತಿಯ ಪ್ರತಿ ಬಿಪಿಎಲ್ ಕುಟುಂಬಕ್ಕೆ 1 ಕೆಜಿ ಬೇಳೆ ವಿತರಿಸಲಾಗುತ್ತಿದೆ