ಇಲಾಖೆಗಳು

ಅರಣ್ಯ ಮತ್ತು ಪರಿಸರ ಇಲಾಖೆ

ಅರಣ್ಯ ಪರಿಸರ ಮತ್ತು ಪರಿಸರ ಇಲಾಖೆಯು ಪ್ರಖ್ಯಾತ ಅರಣ್ಯಗಳನ್ನು ಪ್ರಾಯೋಗಿಕ ಮತ್ತು ಸಂರಕ್ಷಣಾ ಆಧಾರದ ಮೇಲೆ ದೀರ್ಘಕಾಲದಿಂದಲೂ ನಿರ್ವಹಿಸುತ್ತಿರುವ ಇತಿಹಾಸವನ್ನು ಹೊಂದಿದೆ. ಇಲಾಖೆಯು ಅರಣ್ಯ, ಕಾಡು ಮೃಗಗಳ ನಿರ್ವಹಣೆ ಮತ್ತು ರಕ್ಷಣೆ ಮತ್ತು ಅರಣ್ಯ ಪ್ರದೇಶದ ಹೊರಗಿರುವ ಮರಗಳು ಮತ್ತು ಕಾಡು ಮೃಗಗಳ ರಕ್ಷಣೆ ಮತ್ತು ನಿರ್ವಹಣೆಯ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ.

ಸಹಕಾರ ಇಲಾಖೆ

ಕರ್ನಾಟಕ ರಾಜ್ಯದಲ್ಲಿ ಸಹಕಾರ ಘಟಕವು ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳ ಎಲ್ಲಾ ವ್ಯಾಪ್ತಿಯನ್ನು ತಲುಪಿದೆ. ಆಡಳಿತ ವಲಯದ ನಿರಂತರವಾದ ಶ್ರಮದಿಂದ ಸಹಕಾರಗಳು ವಿವಿಧ ವಲಯಗಳಿಗೆ ಸಹಕಾರ ಇಲಾಖೆಯ ಕಾರ‍್ಯಕ್ರಮಗಳು ಯಶಸ್ವಿಯಾಗಿ ತಲುಪಿವೆ.

ಮೀನುಗಾರಿಕೆ ಇಲಾಖೆ

ಮೀನುಗಾರಿಕಾ ಇಲಾಖೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿದೆ. ಏಕೆಂದರೆ ಅದು ರಾಷ್ಟ್ರೀಯ ಆರ್ಥಿಕತೆಗೆ, ವಿದೇಶಿ ವಿನಿಮಯಕ್ಕೆ ಮತ್ತು ಉದ್ಯೋಗ ಸೃಷ್ಟಿಗೂ ಕಾರಣವಾಗಿದೆ. ಕರ್ನಾಟಕವು 320 ಕಿಲೋಮೀಟರ್ ಉದ್ದದ ಕರಾವಳಿಯ ಮಾರ್ಗವನ್ನು ಹೊಂದಿದೆ.

ನಗರಾಭಿವೃದ್ಧಿ ಇಲಾಖೆ

ಸಚಿವ ಕೆ.ಜೆ. ಜಾರ್ಜ್ ಅವರ ಸಾರಥ್ಯದಲ್ಲಿ ನಗರಾಭಿವೃದ್ಧಿ ಇಲಾಖೆಯು ಅತ್ಯಂತ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಯೋಜನೆ ರೂಪಿಸುವುದು, ಅಭಿವೃದ್ಧಿ ಪಡಿಸುವುದು ಸೇರಿದಂತೆ ನಗರದ ಎಲ್ಲ ಮೂಲಸೌಕರ್ಯಗಳ ಯೋಜನೆಗಳ ಅನುಷ್ಠಾನಕ್ಕೆ ಸಚಿವರು ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುತ್ತಿದ್ದಾರೆ.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಯುವಜನೆತೆಯು ರಾಜ್ಯದ ಅಮೂಲ್ಯ ಆಸ್ತಿಯಾಗಿದ್ದು ಅವರ ಕಾರ್ಯಕ್ಷಮತೆಯನ್ನು ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದು ಮುಖ್ಯವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ನೇತೃತ್ವದಲ್ಲಿ ಯುವಜನರಿಗೆ ಕ್ರೀಡೆ ಮತ್ತು ಇತರೆ ತರಬೇತಿ ಚಟುವಟಿಕೆಗಳನ್ನು ಉತ್ತೇಜಿಸುವ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ರಾಜ್ಯದ ಮಹಿಳೆಯರು, ಮಕ್ಕಳು ಮತ್ತು ವಿಕಲಚೇತನರನ್ನು ರಕ್ಷಿಸುವ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೊಂದಿದೆ. ಇದಿಷ್ಟೇ ಅಲ್ಲದೇ ಅವರ ಅಭಿವೃದ್ಧಿಗಾಗಿ ಸರ್ಕಾರೀ ಅಥವಾ ಸರ್ಕಾರೇತರವಾಗಿ ಅಗತ್ಯ ನೀತಿಗಳನ್ನು ರೂಪಿಸುವುದು ಇದರ ಉದ್ದೇಶವಾಗಿದೆ.

ಇಂಧನ ಇಲಾಖೆ

ವಿದ್ಯುತ್ ಕ್ಷೇತ್ರದ ಅಭಿವೃದ್ಧಿ ರಾಜ್ಯದ ಒಟ್ಟಾರೆ ಬೆಳವಣಿಗೆಯನ್ನು ಅವಲಂಬಿಸಿದೆ. ರಾಜ್ಯ ಇಂಧನ ಇಲಾಖೆಯು ಡಿ.ಕೆ.ಶಿವಕುಮಾರ್ ಅವರ ದಕ್ಷ ನೇತೃತ್ವದಲ್ಲಿ ಹಲವು ವಿಶ್ವ ದರ್ಜೆಯ ಯೋಜನೆಗಳನ್ನು ಕೈಗೊಂಡು ವಿದ್ಯುತ್ ಪೂರೈಕೆಯ ಬಂಧವನ್ನು ಬೆಸೆಯುತ್ತಿದೆ. 2020ರ ವೇಳೆಗೆ 24x7 ವಿದ್ಯುತ್ ಪೂರೈಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ.

ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ನೊಂದವರ ನೋವನ್ನು ಉಪಶಮನಗೊಳಿಸಲು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಕರ್ನಾಟಕ ಪರಿಶಿಷ್ಟ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿನಿಯಮ-2013 ಅನ್ನು ಜಾರಿಗೆ ತಂದಿದೆ. ಈ ಮೂಲಕ ಈ ವರ್ಗದವರಿಗೆ ಶೈಕ್ಷಣಿಕ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ರಾಜ್ಯ ಸರ್ಕಾರ ಪ್ರಾಮಾಣಿಕಾವಗಿ ಶ್ರಮಿಸುತ್ತಿದೆ.

ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

ಇದು ರಾಜ್ಯ ಸರ್ಕಾರದ ಅತಿ ಪ್ರಮುಖ ಇಲಾಖೆಯಾಗಿದ್ದು ರಾಜ್ಯದ ಎಲ್ಲಾ ಜನರನ್ನು ತಲುಪುವಂತಹ ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿದೆ. ಸಾರ್ವಜನಿಕರಿಗೆ ಆಹಾರ ಭದ್ರತೆಯನ್ನು ಒದಗಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆಯನ್ನು ನಿರ್ಧರಿಸುವುದು ಇದರ ಉದ್ದೇಶವಾಗಿದೆ.

ಪಶು ಸಂಗೋಪನಾ ಇಲಾಖೆ

ಗ್ರಾಮೀಣ ಆರ್ಥಿಕತೆಯಲ್ಲಿ ಪಶುಸಂಗೋಪನೆ ಪ್ರಮುಖ ಪಾತ್ರ ವಹಿಸುತ್ತದೆ. ರೈತರಿಗೆ ಕೃಷಿ ಆದಾಯವನ್ನು ಹೆಚ್ಚಿಸುವ ಕಾರಣಕ್ಕಾಗಿ ಹಾಲು ಉತ್ಪಾದನೆ, ಕುರಿ ಸಾಕಣೆ, ಮೇಕೆ ಸಾಕಣೆ, ಹಂದಿಸಾಕಣೆ ಮತ್ತು ಕುಕ್ಕೋಟದ್ಯಮದ ಚಟುವಟಿಕೆಗಳು ಪ್ರಮುಖ ಮೂಲ ಆದಾಯವಾಗಿದೆ.

ವಸತಿ ಇಲಾಖೆ

ಗೃಹ ಮತ್ತು ನಗರಾಭಿವೃದ್ಧಿ ಇಲಾಖೆಯನ್ನು 1995 ರಲ್ಲಿ ರೂಪಿಸಲಾಯಿತು. ತದನಂತರ ಇದು ಸ್ವತಂತ್ರ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಇಲಾಖೆಯು ಗ್ರಾಮೀಣ ಮತ್ತು ನಗರ ಭಾಗದಲ್ಲಿ ಹಿಂದುಳಿದ ಮತ್ತು ಬಡ ಸಾರ್ವಜನಿಕರಿಗೆ ಮತ್ತು ಶ್ರಮಿಕ ವರ್ಗಕ್ಕೆ ವಸತಿ ಸೌಲಭ್ಯವನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ.

ಗೃಹ ಸಚಿವಾಲಯ - ಆರು ಕೋಟಿಗೂ ಅಧಿಕ ಜನರ ರಕ್ಷಣೆಯಲ್ಲಿ

ಗೃಹ ಇಲಾಖೆಯು 1952 ರಿಂದ ರಾಜ್ಯದ ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯೊಂದಿಗೆ ಆಡಳಿತ ವ್ಯವಸ್ಥೆ ಮತ್ತು ಹೊರಗಿನ ಆತಂಕಕಾರೀ ಸವಾಲುಗಳನ್ನು ಹತ್ತಿಕ್ಕುವ ಜವಾಬ್ದಾರಿಯನ್ನೂ ಸಹ ಹೊಂದಿದೆ. ಇಷ್ಟೇ ಅಲ್ಲದೇ ಗೃಹ ಇಲಾಖೆಯು ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಬಂಧೀಖಾನೆ, ಗೃಹ ರಕ್ಷಕ ದಳದಂತಹ ಜನೋಪಯೋಗಿ ಸೇವೆಯನ್ನು ಒಳಗೊಂಡಿದೆ.

ಕಾನೂನು ಮತ್ತು ನ್ಯಾಯಾಲಯಗಳ ಇಲಾಖೆ

ಕಾನೂನು ಇಲಾಖೆಯು ವಿಭಿನ್ನ ಮಾರ್ಗವಾಗಿ ನ್ಯಾಯ ನೀಡುವ ವ್ಯವಸ್ಥೆಯನ್ನು ರೂಪಿಸಿದೆ. ಕಾನೂನು ಇಲಾಖೆಯು ಸರ್ಕಾರದ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದಲ್ಲದೇ ಸರ್ಕಾರದ ವಿವಿಧ ಸಚಿವಾಲಯಗಳಿಗೆ ಆಡಳತದ ಅವಧಿಯಲ್ಲಿ ಉಂಟಾಗುವ ತೊಂದರೆಗಳಿಗೆ ಕಾನೂನಾತ್ಮಕ ಸಲಹೆಗಳನ್ನು ನೀಡುತ್ತದೆ.

ಅಲ್ಪಸಂಖ್ಯಾತರು ಮತ್ತು ಹಜ್ ಇಲಾಖೆ

ಕರ್ನಾಟಕದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು, ಸಿಖ್ ಮತ್ತು ಪಾರ್ಸಿ ಧರ್ಮದ ಸಮುದಾಯಗಳನ್ನು ಅಲ್ಪಸಂಖ್ಯಾತ ಸಮುದಾಯಗಳೆಂದು ಗುರುತಿಸಲಾಗಿದೆ. 2011 ನೇ ಜನಗಣತಿಯ ಪ್ರಕಾರವಾಗಿ ಕರ್ನಾಟಕದ ಒಟ್ಟು ಜನಸಂಖ್ಯೆ 6.1 ಕೋಟಿಗಳಲ್ಲಿ 16.28% ನಷ್ಟಿದೆ.

ಮೂಲ ಸೌಕರ್ಯಗಳ ಅಭಿವೃದ್ಧಿ ಇಲಾಖೆ

ಮೂಲ ಸೌಕರ್ಯಗಳ ಅಭಿವೃದ್ಧಿ ಇಲಾಖೆಯು ವಾಯು, ರೈಲು ಮತ್ತು ರಸ್ತೆ ಮಾರ್ಗದ ಅಭಿವೃದ್ಧಿಯಲ್ಲಿ ಮಹತ್ತರವಾದಂತಹ ಪಾತ್ರವನ್ನು ವಹಿಸಿದ್ದು ಸಾರ್ವಜನಿಕರ ಸಂಪರ್ಕ ವ್ಯವಸ್ಥೆಗೆ ಅವಿರತವಾದ ಕೊಡುಗೆಯನ್ನು ನೀಡಿದೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಖಾಸಗೀ ಹೂಡಿಕೆಯನ್ನು ಉತ್ತೇಜಿಸುವ ಕೆಲಸವನ್ನು ಸರ್ಕಾರವು ಮಾಡಿದೆ.