/ departments

ಅರಣ್ಯ ಮತ್ತು ಪರಿಸರ ಇಲಾಖೆ

ಅರಣ್ಯ ಪರಿಸರ ಮತ್ತು ಪರಿಸರ ಇಲಾಖೆಯು ಪ್ರಖ್ಯಾತ ಅರಣ್ಯಗಳನ್ನು ಪ್ರಾಯೋಗಿಕ ಮತ್ತು ಸಂರಕ್ಷಣಾ ಆಧಾರದ ಮೇಲೆ ದೀರ್ಘಕಾಲದಿಂದಲೂ ನಿರ್ವಹಿಸುತ್ತಿರುವ ಇತಿಹಾಸವನ್ನು ಹೊಂದಿದೆ. ಇಲಾಖೆಯು ಅರಣ್ಯ, ಕಾಡು ಮೃಗಗಳ ನಿರ್ವಹಣೆ ಮತ್ತು ರಕ್ಷಣೆ ಮತ್ತು ಅರಣ್ಯ ಪ್ರದೇಶದ ಹೊರಗಿರುವ ಮರಗಳು ಮತ್ತು ಕಾಡು ಮೃಗಗಳ ರಕ್ಷಣೆ ಮತ್ತು ನಿರ್ವಹಣೆಯ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ.

ಕರ್ನಾಟಕ ರಾಜ್ಯವು ೧,೯೧,೭೯೧ ಚದುರ ಕಿ.ಮೀ ನಷ್ಟು ಭೌಗೋಳಿಕ ಪ್ರದೇಶವನ್ನು ಹೊಂದಿದ್ದು ೨೯,೬೮೮.೩೭ ಚದುರ ಕಿ.ಮೀನಷ್ಟು ಅರಣ್ಯದಿಂದ ಕೂಡಿದೆ. ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಮಂತ್ರಿಗಳಾದ ಶ್ರೀ ಬಿ. ರಾಮನಾಥ ರೈ ರವರ ನೇತೃತ್ವದಲ್ಲಿ ಇಲಾಖೆಯು ಸಸ್ಯ ಹಾಗೂ ಪ್ರಾಣಿಗಳ ರಕ್ಷಣೆ ಮತ್ತು ಅರಣ್ಯ ಪ್ರದೇಶದ ವಿಸ್ತರಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದೆ.

ಕರ್ನಾಟಕ ರಾಜ್ಯವು ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಹುಲಿ (೪೦೭) ಮತ್ತು ಆನೆಗಳನ್ನು (೬,೦೭೨) ಹೊಂದಿದ್ದು ಇತರೆ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ವನ್ಯಜೀವಿ ಜನಸಂಖ್ಯೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೆ ಕೆಲವು ಸ್ಥಳೀಯ ತಳಿಗಳನ್ನು ಸಹಾ ಹೊಂದಿದೆ. ಎಲ್ಲಾ ರೀತಿಯ ಸಸ್ಯಗಳು ಹಾಗೂ ವನ್ಯಮೃಗಗಳನ್ನು ಇಲಾಖೆಯ ಭಾವೋದ್ರಿಕ್ತ ಕಾರ್ಮಿಕರು ಉಗ್ರವಾಗಿ ರಕ್ಷಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮುದ್ರಿತವಾದ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ ೨೦೧೫ (ಐ.ಎಸ್.ಎಫ್.ಆರ್) ವರದಿಯಂತೆ ಅರಣ್ಯ ಪ್ರದೇಶದ ವಿಸ್ತರಣೆಯಾಗಿರುವ ೪ ಮುಖ್ಯ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಒಂದಾಗಿದೆ. ಬೆನ್ನಿಯಲ್ ವರದಿಯಂತೆ ಕರ್ನಾಟಕವು ೨೦೧೩ನೇ ಸಾಲಿನ ಮೌಲ್ಯಮಾಪನದ ಪ್ರಕಾರ ೨೯೦ ಚ.ಕೀ.ಮೀ ಅರಣ್ಯವನ್ನು ಮತ್ತು ಮರಗಳಿರುವ ಪ್ರದೇಶಗಳನ್ನು ವೃದ್ಧಿಸಿದೆ.

"ಹವಾಮಾನ ಬದಲಾವಣೆಯು ಧೀರ್ಘಕಾಲದ ಪರಿಣಾಮವನ್ನು ಬೀರುವುದರಿಂದ ಜಾಗತಿಕ ತಾಪಮಾನ ಏರಿಕೆಯನ್ನು ಪರೀಕ್ಷಿಸುವುದು ಅಗತ್ಯವಾಗಿದೆ. ಅರಣ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು" ಎಂದು ಅರಣ್ಯ ಮಂತ್ರಿಗಳಾದ ಬಿ. ರಾಮನಾಥ ರೈ ಹೇಳಿದ್ದಾರೆ.

ಅರಣ್ಯ ಇಲಾಖೆಯಿಂದ ರೂಪಿಸಲಾದ ಯೋಜನೆಗಳು:

ಕೃಷಿ ಅರಣ್ಯ ಬೆಳವಣಿಗೆಗೆ ಪ್ರೋತ್ಸಾಹ ಯೋಜನೆ
ಕರ್ನಾಟಕ ರಾಜ್ಯ ಸರ್ಕಾರವು ಅರಣ್ಯ ಪ್ರದೇಶ ಮತ್ತು ರಾಜ್ಯದಲ್ಲಿರುವ ಮರಗಳ ಸಂಖ್ಯೆಯನ್ನು ಶೇಕಡಾ ೨೨ ರಿಂದ ೩೩ಕ್ಕೆ ಹೆಚ್ಚಿಸುವ ಧ್ಯೇಯವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಪ್ರಾರಂಭಿಸಿ ಕೃಷಿಕರಿಗೆ ಮರಗಳನ್ನು ನೆಡುವಂತೆ ಪ್ರೋತ್ಸಾಹಿಸಿದೆ. ಈ ಯೋಜನೆಯಲ್ಲಿ ಕೃಷಿ ಬೆಳೆಗಳ ಬಂಡೆಗಳಲ್ಲಿ/ ಕೃಷಿಬೆಳೆಯ ಸುತ್ತಲು / ಅಂತರ ಬೆಳೆಯಾಗಿ ಅಥವಾ ನೀರಾವರಿಯುಕ್ತ ಪ್ರದೇಶದಲ್ಲಿ ಅನುಕೂಲವಾದ ರೀತಿಯಲ್ಲಿ ಮರಗಳನ್ನು ಬೆಳೆಸಬಹುದಾಗಿದೆ. ಈ ಯೋಜನೆಯಡಿಯಲ್ಲಿ ಕೃಷಿಕರು ಸುಮಾರು ೪೦೦ ಕಾಡು ಮರಗಳನ್ನು ಒಂದು ಹೆಕ್ಟೇರ್ ಭೂಮಿಯಲ್ಲಿ ಬೆಳೆಸಬಹುದಾಗಿದೆ. ಪ್ರಾರಂಭಿಕ ಹಂತದಲ್ಲಿ ಕೃಷಿಕರಿಗೆ ಪ್ರತಿ ಮರಕ್ಕೆ ೧೦೦ ರೂಪಾಯಿಗಳಂತೆ ಜೀವವಿರುವ ಗಿಡಗಳಿಗೆ ಮೂರು ವರ್ಷದವರೆಗೆ ನೀಡಲಾಗುವುದು. ಈ ವರೆಗೆ ೧೦ ಕೋಟಿ ಸಸಿಗಳನ್ನು ವಿತರಿಸಲಾಗಿದ್ದು ೨೯ ಕೋಟಿ ರೂಪಾಯಿಗಳನ್ನು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ೬೩,೯೩೯ ಫಲಾನುಭವಿಗಳಿಗೆ ನೀಡಲಾಗಿದೆ. ಆರ್ಥಿಕ ವರ್ಷ ೨೦೧೭-೧೮ರಿಂದ ಪ್ರತಿ ಮರಕ್ಕೆ ಪ್ರೋತ್ಸಾಹ ಧನವನ್ನು ೪೫ ರೂಪಾಯಿಗಳಿಂದ ೧೦೦ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಕೆಳ ಹಂತದ ಅರಣ್ಯ ಪ್ರದೇಶದ ಅಭಿವೃದ್ಧಿ
ಅರಣ್ಯ ಇಲಾಖೆಯು ಕೆಳ ಹಂತದ ಅರಣ್ಯ ಪ್ರದೇಶವನ್ನು ಪುನರಜ್ಜೀವನಗೊಳಿಸುವ ನಿಟ್ಟಿನಲ್ಲಿ ಸಸಿಗಳನ್ನು ಬದಲಿಸುವುದು, ಪ್ರಾಣಿಗಳು ಮೇಯುವುದು ಮತ್ತು ಬೆಂಕಿಯಿಂದ ರಕ್ಷಿಸುವುದು ಹಾಗೂ ನೈಸರ್ಗಿಕವಾಗಿ ಪುನರಾಭಿವೃದ್ಧಿಗೊಳಿಸುವ ವಿವಿಧ ಕ್ರಮವನ್ನು ಕೈಗೊಂಡಿದೆ.

ನಗರ ಪ್ರದೇಶಗಳನ್ನು ಹಸಿರಾಗಿಸುವುದು
ಕರ್ನಾಟಕ ರಾಜ್ಯವು ವಾಹನಗಳಿಂದ, ನಗರಗಳಲ್ಲಿರುವ ಕಟ್ಟಡಗಳಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಲ್ಲಿ ಮರ ನೆಡುವ ಯೋಜನೆಯನ್ನು ಕೈಗೊಂಡಿದೆ. ಸ್ಕೂಲ್, ಕಾಲೇಜು ಮತ್ತು ಪಟ್ಟಣಗಳಲ್ಲಿ ಸಮೂಹ ತೋಟದ ಕಾರ್ಯ ಕೈಗೊಂಡಿದೆ. ಈ ತೋಟಗಳಿಂದ ಹೆಚ್ಚಿನ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೆ ಹಸಿರು ಮತ್ತು ಸುಂದರ ಪ್ರಕೃತಿಕ ನೋಟದ ಸೃಷ್ಟಿಯಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ವರ್ಗ ಉಪ ಯೋಜನೆ
ಅರಣ್ಯ ಸಂಪನ್ಮೂಲಗಳ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅರಣ್ಯ ಪ್ರದೇಶದ ಸಮೀಪದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗದವರ ಉನ್ನತಿಗಾಗಿ ಎಸ್.ಸಿ.ಪಿ / ಟಿ.ಎಸ್.ಪಿ ಹಣ ಹೂಡಿಕೆಯಿಂದ ೧.೬ಲಕ್ಷ ಎಲ್.ಪಿ.ಜಿ. ಸಂಪರ್ಕ, ೧,೧೬೮ ಜೈವಿಕ ಅನಿಲ ಸ್ಥಾವರಗಳ ಸ್ಥಾಪನೆ, ೬,೨೭೬ ಸೌರ ನೀರಿನ ಹೀಟರ್, ೧,೮೦೧ ಜೇನು ಸಾಕಾಣಿಕೆ ಪೆಟ್ಟಿಗೆಗಳ ವಿತರಣೆ, ೫೨,೪೫೭ ಸೌರ್ಯದೀಪಗಳ ಅಳವಡಿಕೆ ಹಾಗೂ ೧೮,೫೬೧ ಸಮರ್ಥ ಇಂಧನವುಳ್ಳ ಸರಳ ಒಲೆಗಳ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ. ಇದರಿಂದಾಗಿ ಕುಟುಂಬದವರು ಸೌದೆಗಳಿಗಾಗಿ ಕಾಡನ್ನು ಅವಲಂಬಿಸಿರುವುದು ಕಡಿಮೆಯಾಗಿದೆ.

ಭೂಮಿ ಹಕ್ಕು
ಬುಡಕಟ್ಟುಜನಾಂಗದವರ ಜೀವನ ನಿರ್ವಹಣೆ ಮತ್ತು ಪುನರ್ವಸತಿಗಾಗಿ ಇಲಾಖೆಯು ಅರಣ್ಯ ಕಾಯಿದೆಯಡಿಯಲ್ಲಿ ೪೨,೯೦೧ ಎಕರೆಯನ್ನು ೧೩,೦೪೯ ಜನರಿಗೆ ವಿತರಿಸುವ ಕಾರ್ಯವನ್ನು ನಮ್ಮ ಸರ್ಕಾರವು ಕೈಗೊಂಡಿದೆ.

ಮಾನವ - ಪ್ರಾಣಿ ಪ್ರದೇಶದ ಸಂಪರ್ಕವನ್ನು ಕಡಿಮೆಗೊಳಿಸುವಿಕೆ
ಅರಣ್ಯದಲ್ಲಿನ ಕಾಡು ಪ್ರಾಣಿಗಳ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಮಾನವನ ನಡುವೆ ಹೆಚ್ಚುತ್ತಿರುವ ಸಂಘರ್ಷ ಹಾಗೂ ಜೀವ ಹಾನಿ ಮತ್ತು ಸಂಪತ್ತನ್ನು ಕ್ಷೀಣಗೊಳಿಸಿ ಕ್ರಮೇಣವಾಗಿ ಪರಿಹರಿಸಲು ಇಲಾಖೆಯು ಕ್ರಮವನ್ನು ಕೈಗೊಂಡಿದೆ. ಸೌರ ಬೇಲಿಯ ನಿರ್ಮಾಣ, ಕಂದಕಗಳ ಉತ್ಖತನ, ಉಪಯೋಗವಿಲ್ಲದ ರೈಲುಹಳಿಗಳಿಂದ ಅಡ್ಡಗಟ್ಟು ನಿರ್ಮಾಣ, ಮಣ್ಣಿನ ಸವೆತವನ್ನು ತಡೆಗಟ್ಟಲು ಅರಣ್ಯದೊಳಗೆ ನೀರಿನ ರಂಧ್ರಗಳ ನಿರ್ಮಾಣ ಮಾಡಿ ಅರಣ್ಯದ ಹೊರಗೆ ಮಾನವನ ಚಟುವಟಿಕೆಗಳ ಮತ್ತು ಕಾಡು ಮೃಗಗಳ ನಡುವಿನ ಸಂಪರ್ಕವನ್ನು ಕಡಿಮೆ ಮಾಡಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ತೀರ್ವ ಬೇಸಿಗೆ ತಿಂಗಳಿನಲ್ಲಿ ನೀರಿನ ಕೊರತೆಯಿಂದ ಹೊರಬರಲು ಇಲಾಖೆಯು ಸ್ವಯಂ ಕಾರ್ಯನಿರ್ವಹಿಸುವ ಸೌರ ಪಂಪ್‌ಗಳನ್ನು ದಟ್ಟ ಅರಣ್ಯದಲ್ಲಿರುವ ಜಲಸಸ್ಯಗಳ ಮತ್ತು ನೀರಿನ ಹೊಂಡಗಳಿಗೆ ಅಳವಡಿಸಲಾಗಿದೆ.

ಬೆಳೆ, ದನಕರು ಮತ್ತು ಜೀವಹಾನಿಗೆ ಪರಿಹಾರ
ಅರಣ್ಯ ಇಲಾಖೆಯು ಮಾನವರ ಮತ್ತು ಕಾಡು ಮೃಗಗಳ ರಕ್ಷಣೆಗಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರೂ ಸಹ ಕೆಲವು ತಡೆಯಲಾಗದಂತಹ ಪರಿಸ್ಥಿತಿ ಮತ್ತು ಘಟನೆಗಳು ಸಂಭವಿಸುತ್ತವೆ. ಈ ಸ್ಥಿತಿಯಿಂದ ಉಂಟಾದ ಹಾನಿಗಾಗಿ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಬೆಳೆ ಹಾನಿ ಪರಿಹಾರ ಹಣವನ್ನು ಪ್ರಸ್ತುತ ಇರುವ ೫೦,೦೦೦ ರೂಪಾಯಿಗಳಿಂದ ೧,೦೦,೦೦೦ ರೂಪಾಯಿವರೆಗೆ ಹೆಚ್ಚಿಸಿದ್ದಾರೆ. ಕೃಷಿಕರು ದನ, ಎಮ್ಮೆ ಮತ್ತು ಎತ್ತನ್ನು ಕಳೆದುಕೊಂಡಲ್ಲಿ ೧೦,೦೦೦ ರೂಪಾಯಿ ಹಾಗೂ ಕುರಿ ಅಥವಾ ಮೇಕೆಯನ್ನು ಕಳೆದುಕೊಂಡಲ್ಲಿ ೫,೦೦೦ ರೂಪಾಯಿಯನ್ನು ನೀಡಲಾಗುವುದು. ಮಾನವನಿಗೆ ದುರಂತ ಸಂಭವಿಸಿದಲ್ಲಿ ೫,೦೦,೦೦೦ ರೂಪಾಯಿಯನ್ನು ದುರಂತಕ್ಕೆ ತುತ್ತಾದ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗೆ ನೀಡಲಾಗುವುದು.

ಗಂಧದ ಮರದ ಸಾಗುವಳಿ
ಗಂಧದ ಮರದ ವೈಭವವನ್ನು ಹೊಂದಿದ್ದ ಕರ್ನಾಟಕರಾಜ್ಯವನ್ನು ಪುನಃ ವೈಭವೀಕರಿಸಲು ಇಲಾಖೆಯು ೬ ಲಕ್ಷ ಗುಣ ಮಟ್ಟದ ಸಸಿಗಳನ್ನು ಮತ್ತು ೭೦೦ ಹೆಕ್ಟೇರ್‌ನಷ್ಟು ಗಂಧದ ಮರದ ತೋಟವನ್ನು ಕೋಲಾರ ಮತ್ತು ಚಿಕ್ಕಮಗಳೂರಿನಲ್ಲಿ ನಿರ್ಮಿಸಿದ್ದು ಸರಣಿ ಸರಪಳಿ ಜಾಲರಿಯನ್ನು, ೨೪ ಗಂಟೆಗಳ ವೀಕ್ಷಣೆ ಮತ್ತು ಕಾವಲು, ಮಣ್ಣಿನ ಕೆಲಸ ಹಾಗೂ ಇತರೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ.

Namma-Karntaka-Post_Forest-Ecology-and-Environment-Department_Mailer-Format

ಮರಗಳ ಉದ್ಯಾನ ನಿರ್ಮಾಣ ಕಾಮಗಾರಿ
ಇಲಾಖೆಯು ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಮರಗಳ ಉದ್ಯಾನವನವನ್ನು ಪ್ರಾರಂಭಿಸಲು ಸಾಲುಮರ ತಿಮ್ಮಕ್ಕ ವೃಕ್ಷ ಉದ್ಯಾನವನ ಯೋಜನೆಯನ್ನು ಉಪಕ್ರಮವಾಗಿ ಕೈಗೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ಅರಣ್ಯ ಇಲಾಖೆಯ ಭೂಮಿಯಲ್ಲಿ ೫೦ ಮರಗಳ ಉದ್ಯಾನವನವನ್ನು ನಿರ್ಮಿಸುವ ಕಾರ್ಯ ಕೈಗೊಳ್ಳಲಾಗಿದೆ.

ರಸ್ತೆಗಳಲ್ಲಿ ಮರಗಳ ಅಭಿವೃದ್ಧಿ
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ೪,೭೨೦ ಉದ್ದದ ರಸ್ತೆಗಳ ನಡುವೆ ಮರಗಳ ಬೆಳೆಸುವ ಕಾರ್ಯವನ್ನು ವಿವಿಧ ಯೋಜನೆಯಡಿಯಲ್ಲಿ ಕಾಯ್ದಿರಿಸಲಾದ ಶೇಕಡಾ ೧ರಷ್ಟು ಅನುದಾನದಿಂದ ಪ್ರಾರಂಭಿಸಲಾಗಿದೆ.

ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಟಾನ
ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಂಶೋಧನೆಯನ್ನು ಕೈಗೊಳ್ಳಲು ೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಬೆಂಗಳೂರು - ಮೈಸೂರು ರಸ್ತೆಯ ಮಾರ್ಗದಲ್ಲಿರುವ ಚಿಕ್ಕಮಣ್ಣುಗುಡ್ಡ ಸಂಶೋಧನಾ ಕೇಂದ್ರದಲ್ಲಿ ಅರಣ್ಯ ಮಾಹಿತಿ ಕೇಂದ್ರವನ್ನು ನಿರ್ಮಿಸಲು ೫ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Forest--Ecology-and-Environment