/ department

ಆರೋಗ್ಯ ಇಲಾಖೆ

ಕರ್ನಾಟಕ ರಾಜ್ಯವು ತನ್ನ ಜನತೆಗೆ ಸಮರ್ಪಕ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ರಾಷ್ಟ್ರದಲ್ಲಿಯೇ ಅಗ್ರಮಾನ್ಯ ರಾಜ್ಯವಾಗಿದೆ. ಭಾರತ ಸರ್ಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಕಲ್ಪನೆಯನ್ನು ರೂಪಿಸುವ ಮುನ್ನವೇ, ರಾಜ್ಯದ ಜನತೆಗೆ ಸಮರ್ಪಕ ಆರೋಗ್ಯ ರಕ್ಷಣೆ ಒದಗಿಸಲು ಗುಣಪಡಿಸುವ, ನಿವಾರಿಸುವ, ಪ್ರೋತ್ಸಾಹಿಸುವ ಹಾಗೂ ಪುನರ್ನಿರ್ಮಾಣ ಆರೋಗ್ಯ ರಕ್ಷಣೆಯ ವಿತರಣಾ ವ್ಯವಸ್ಥೆಗಳಿರುವ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾಜ್ಯವು ಆಗಲೇ ಸ್ಥಾಪಿಸಲು ಪ್ರಾರಂಭಿಸಿತ್ತು ಎಂಬುದು ಗಮನಾರ್ಹ ಸಂಗತಿ ಆಗಿದೆ.

ರಾಜ್ಯ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಮಾನ್ಯ ಆರೋಗ್ಯ ಸಚಿವರಾದ ಶ್ರೀ.ಕೆ.ಆರ್.ರಮೇಶ್ ಕುಮಾರ್ ಅವರ ನೇತೃದ್ವದಲ್ಲಿ ರೂಪಿಸಿದ್ದು ಇಲಾಖೆಯು ಸಾರ್ವಜನಿಕರಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು ಅವು ಈ ಕೆಳಗಿನಂತಿವೆ:

ಶಿಶು ಮತ್ತು ಗರ್ಭಾವಸ್ಥೆಯ ಮರಣದಲ್ಲಿ ಗಣನೀಯ ಇಳಿಕೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿ ಹೊಂದಿದ್ದು, ಶಿಶು ಮರಣ ಪ್ರಮಾಣವನ್ನು 31 ರಿಂದ 28 ಕ್ಕೆ ಇಳಿಸಲಾಗಿದೆ. ತಾಯಂದಿರ ಮರಣ ಪ್ರಮಾಣವನ್ನು ಪ್ರತಿ 1 ಲಕ್ಷ ಜೀವಂತ ಜನನಗಳಿಗೆ 178 ರಿಂದ 133 ಕ್ಕೆ ಇಳಿಸಲಾಗಿದೆ. 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು 100 ಸಜೀವ ಜನನಕ್ಕೆ 31 ಆಗಿದ್ದು, ಗುರಿ ಸಾಧಿಸಿದ ಆರು ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. ಲಸಿಕಾ ಕಾರ್ಯಕ್ರಮದಡಿಯಲ್ಲಿ ಪೂರ್ಣ ಲಸಿಕೆ ಪಡೆದ ಮಕ್ಕಳ ಪ್ರಮಾಣವನ್ನು ಶೇಕಡ 80 ರಿಂದ 91.4 ಕ್ಕೆ ಏರಿಸಲಾಗಿದೆ.

ವಾಜಪೇಯಿ ಆರೋಗ್ಯಶ್ರೀ ಕಾರ್ಯಕ್ರಮದಡಿಯಲ್ಲಿ 1.5 ಲಕ್ಷ ಫಲಾನುಭವಿಗಳಿಗೆ ಕ್ಲಿಷ್ಟಕರ ರೋಗಗಳಿಗೆ ಚಿಕಿತ್ಸೆ ನೀಡಲಾಗಿದೆ. ಶುಚಿ ಕಾರ್ಯಕ್ರಮದಡಿಯಲ್ಲಿ 72.7 ಲಕ್ಷ ಹದಿಹರೆಯದ ಬಾಲಕಿಯರಿಗೆ ಋತುಚಕ್ರ ಸಂದರ್ಭದಲ್ಲಿ ಶುಚಿತ್ವ ಕಾಪಾಡಲು ಪ್ರತಿಯೊಬ್ಬರಿಗೆ ವರ್ಷಕ್ಕೆ 10 ಸ್ಯಾನಿಟರಿ ಪ್ಯಾಡ್‍ಗಳಿರುವ 13 ಪ್ಯಾಕೆಟ್‍ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಆರೋಗ್ಯ ಕವಚ (108) ಯೋಜನೆಯಡಿಯಲ್ಲಿ ಒಟ್ಟು 1.7 ಕೋಟಿ ರೋಗಿಗಳು ಆಂಬ್ಯುಲೆನ್ಸ್ ಸೇವೆ ಪಡೆದಿದ್ದಾರೆ. ಡಯಾಲಿಸಿಸ್ ಕಾರ್ಯಕ್ರಮದಡಿಯಲ್ಲಿ 31,561 ಮೂತ್ರಪಿಂಡ ವೈಫಲ್ಯದ ರೋಗಿಗಳಿಗೆ ಒಟ್ಟು 1.6 ಲಕ್ಷ ಬಾರಿ ಡಯಾಲಿಸಿಸ್ ಮಾಡಲಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣಾ ಕಾರ್ಯಕ್ರಮದಡಿಯಲ್ಲಿ 66.5 ಲಕ್ಷ ಜನರನ್ನು ತಪಾಸಣೆ ನಡೆಸಿದ್ದು, ಇವರಲ್ಲಿ ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡ ಕಂಡು ಬಂದಂತಹ ಜನರಿಗೆ ನಿಯಮಿತ ಚಿಕಿತ್ಸೆ ನೀಡಲಾಗುತ್ತಿದೆ.

ಲಸಿಕೆ
“ರೋಗ ಬರುವ ಮುನ್ನವೇ ತಡೆಗಟ್ಟಬೇಕು” ಎಂಬ ಮಂತ್ರದೊಂದಿಗೆ ಆರೋಗ್ಯ ಇಲಾಖೆಯು ರಾಜ್ಯದ ಎಲ್ಲಾ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವ ಗಂಭೀರವಾದ ಹೆಜ್ಜೆಯನ್ನು ಇಟ್ಟಿದೆ. 2013 ರಿಂದ ಇಂದಿನ ದಿನಾಂಕದ ವರೆಗೆ ರಾಜ್ಯದಲ್ಲಿ 45,33,095 ಮಕ್ಕಳಿಗೆ ಲಸಿಕೆಯನ್ನು ಹಾಕಿಸಲಾಗಿದ್ದು ಲಸಿಕೆಯುಕ್ತ ಮಕ್ಕಳ ಪ್ರಮಾನವು 80 ರಿಂದ 91.4 ರಷ್ಟು ಹೆಚ್ಚಾಗಿದೆ.

Graph_2

ಆರೋಗ್ಯ ಕವಚ (108) ಯೋಜನೆ
ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 1.7 ಕೋಟಿ ರೋಗಿಗಳು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಅಂಬುಲೆನ್ಸ್ ಸೇವೆಗಳನ್ನು ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು 108 ತುರ್ತು ಅಂಬುಲೆನ್ಸ್ ಸೇವೆಗೆ ಹೆಚ್ಚುವರಿ ವಾಹನಗಳನ್ನು ಸೇರ್ಪಡೆಗೊಳಿಸಿದ್ದು ಪ್ರತಿ 35,000 ಸಾವಿರ ಜನರಿಗೆ ಒಂದು ಅಂಬುಲೆನ್ಸ್ ಅನ್ನು ನಿಗದಿಗೊಳಿಸದ್ದಾರೆ.

ಸಾರ್ವಜನಿಕ ಆರೋಗ್ಯ ಕೇಂದ್ರಗಳು – ಮೊದಲು ಚಿಕಿತ್ಸೆ ನಂತರ ಹಣ ಪಾವತಿ
ರಾಜ್ಯದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳನ್ನು ಒದಗಿಸುವುದರಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನವನ್ನು ಪಡೆದಿದೆ. ಕರ್ನಾಟಕದಲ್ಲಿ 1.4 ಕೋಟಿ ಕುಟುಂಬಗಳು 1.5 ಲಕ್ಷ ರೂಪಾಯಿಗಳವರೆಗೆ ನಗದು ರಹಿತವಾದ ಚಿಕಿತ್ಸೆಗೆ ಅರ್ಹವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿದವರು, ರೈತರು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನರಿಗೆ ಕರ್ನಾಟಕ ಸರ್ಕಾರವು ಅವರ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಭರಿಸಲಿದೆ. ಇನ್ನು ಬಿ ಪಟ್ಟಿಯಲ್ಲಿ ಬರುವ ಜನರು ವಾರ್ಷಿಕವಾಗಿ 300 ರೂ ಪ್ರೀಮಿಯಂ (ಗ್ರಾಮೀಣ ಜನರು) ಮತ್ತು 700 ರೂಪಾಯಿ ವಾರ್ಷಿಕ ಪ್ರೀಮಿಯಂ (ನಗರದ ಜನರು) ಪಾವತಿಸುವ ಮೂಲಕ ಆರೋಗ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

Namma-Karntaka-health

ಸರ್ಕಾರೀ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಆರೈಕೆ ಮತ್ತು 1,000 ದಷ್ಟು ಎರಡನೇ ಶಸ್ತ್ರ ಚಿಕಿತ್ಸಾ ವಿಧಾನಗಳನ್ನು ಎಲ್ಲಾ ಸಾರ್ವಜನಿಕರು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. 516 ರೀತಿಯ ಕಷ್ಟಕರವಾದ ಚಿಕಿತ್ಸೆಗಳನ್ನು ಖಾಸಗೀ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತಿದ್ದು ಎ ದರ್ಜೆಯ ರೋಗಿಗಳಿಗೆ ಉಚಿತವಾದ ಚಿಕಿತ್ಸೆ ಮತ್ತು ಉಳಿದವರಿಗೆ ಒಟ್ಟು ವೆಚ್ಚದಲ್ಲಿ 30% ನಷ್ಟು ಹಣವನ್ನು ಮರಳಿ ಪಡೆದುಕೊಳ್ಳಬಹುದಾಗಿದೆ. ಇತರೆ 633 ವಿಧಧ ಚಿಕಿತ್ಸೆಗಳಿಗೆ ಬಿ ವರ್ಗದ ಜನರೂ ಸಹ 30% ನಷ್ಟು ಹಣವನ್ನು ಮರಳಿ ಪಡೆದುಕೊಳ್ಳುವ ಸೌಲಭ್ಯವಿದೆ. ನವಂಬರ್ 1 ರಿಂದ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರದ ವತಿಯಿಂದ ಯೂನಿವರ್ಸೆಲ್ ಆರೋಗ್ಯ ಕಾರ್ಡ್ ಗಳನ್ನು ನೀಡಲಾಗುತ್ತಿದೆ.

“ಸಾಮಾಜಿಕ ಅಭಿವೃದ್ಧಿಯ ಬದ್ಧತೆಯನ್ನು ಇಟ್ಟುಕೊಂಡು ಜನರಿಗೆ ಸಾರ್ವಜನಿಕ ಆರೋಗ್ಯ ಚೀಟಿಗಳನ್ನು ಜನರಿಗೆ ವಿತರಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ”, - ಮುಖ್ಯಮಂತ್ರಿ ಸಿದ್ದರಾಮಯ್ಯ

11087814_977940808883276_5108084195909214090_o

ಬೈಕ್ ಅಂಬುಲೆನ್ಸ್
ಅಮೂಲ್ಯ ಸಮಯದಲ್ಲಿ ರೋಗಿಗಳನ್ನು ವೇಗವಾಗಿ ತಲುಪಲು ಇಲಾಖೆಯು ಬೈಕ್ ಅಂಬುಲೆನ್ಸ್ ಸೇವೆಯನ್ನು ಅಳವಡಿಸಿದೆ. ಈ ವಾಹನವು 40 ಅಗತ್ಯವಾದ ವಸ್ತುಗಳನ್ನು ಹೊಂದಿದ್ದು ರೋಗಿಗಳಿಗೆ ಇದರಿಂದ ಸಹಾಯವಾಗುತ್ತಿದೆ.

ನಗು-ಮಗು
ನಗು-ಮಗು ವಾಹನಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೆ ತಲಾ ಒಂದರಂತೆ ನಿಯೋಜಿಸಲಾಗಿದೆ. ಈ ವಾಹನಗಳಿಗೆ ಒಬ್ಬ ಚಾಲಕರನ್ನು ಜಿಲ್ಲಾ ಆರೋಗ್ಯ ಸಂಘದಿಂದ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಫೆಬ್ರವರಿ 5 2014 ರಂದು 200 ನಗು-ಮಗು ವಾಹನಗಳನ್ನು ಉದ್ಘಾಟಿಸಲಾಗಿದೆ.

ಡಯಾಲಿಸಿಸ್ ಕೇಂದ್ರಗಳು
20 ಜಿಲ್ಲಾಸ್ಪತ್ರೆ ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು 3 ಪ್ರಮುಖ ಆಸ್ಪತ್ರೆಗಳು ಹಾಗೂ 34 ತಾಲ್ಲೂಕು ಆಸ್ಪತ್ರೆಗಳು ಇದರಲ್ಲಿ ಒಳಗೊಂಡಿವೆ. 2017-18 ರಲ್ಲಿ ಉಳಿದ 114 ತಾಲ್ಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲಾಗುವುದು. ಇಲ್ಲಿಯ ತನಕ 1.6 ಲಕ್ಷ ಬಾರಿ ಡಯಾಲಿಸಿಸ್ ಚಿಕಿತ್ಸೆಯನ್ನು ಕೈಗೊಳ್ಳಲಾಗಿದ್ದು ಇದರಿಂದ 31,561 ರೋಗಿಗಳಿಗೆ

1074878_971227542925710_5600163477633501926_o

ಶುಚಿ ಯೋಜನೆ
ಈ ಯೋಜನೆಯಡಿಯಲ್ಲಿ ವರ್ಷಕ್ಕೆ 72.7 ಲಕ್ಷ ಹುಡುಗಿಯರಿಗೆ 10 ಸ್ಯಾನಿಟರಿ ಪ್ಯಾಡ್ ಗಳನ್ನು ಒಳಗೊಂಡ 13 ಪ್ಯಾಕೆಟ್ ಗಳನ್ನು ವಾರ್ಷಿಕವಾಗಿ ನೀಡಲಾಗುತ್ತಿದ್ದು ಮುಟ್ಟಿನ ಅವಧಿಯಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಇದು ಬಹಳಷ್ಟು ಸಹಕಾರಿಯಾಗಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು
ಪ್ರತಿಯೊಬ್ಬರಿಗೂ ಅತ್ಯಾಧುನಿಕವಾದಂತಹ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ದಾವಣಗೆರೆ, ರಾಮನಗರ,ತುಮಕೂರು, ವಿಜಯಪುರ ಮತ್ತು ಕೋಲಾರ ಜಿಲ್ಲೆಯಲ್ಲಿ 25 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕ್ಯಾನ್ಸರ್, ಹೃದಯದ ಖಾಯಿಲೆಗಳು ಮತ್ತು ಇತರೆ ಖಾಯಿಲೆಗಳಿಂದ ಬಳಲುತ್ತಿರುವವರಿಗಾಗಿ 5 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿದೆ.

ಶುದ್ಧ ಕುಡಿಯುವ ನೀರು
ಆಸ್ಪತ್ರೆಗಳಲ್ಲಿ ಶುದ್ದ ಕುಡಿಯುವ ನೀರು ದೊರೆಯುವುದಕ್ಕಾಗಿ ಕರ್ನಾಟಕ ಸರ್ಕಾರವು 188 ಆರ್ ಓ +ಯುವಿ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು 21 ಜಿಲ್ಲಾಸ್ಪತ್ರೆಗಳು, 146 ತಾಲೂಕು ಆಸ್ಪತ್ರೆಗಳು ಮತ್ತು 21 ಸಮುದಾಉ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಿರುತ್ತದೆ.

ಬೌರಿಂಗ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಆಧುನೀಕರಣ ಮತ್ತು ಮೆಡಿಕಲ್ ವಿಶ್ವ ವಿದ್ಯಾಲಯ
ದೇಶದ ಅತ್ಯಂತ ಪ್ರಾಚೀನ ಆಸ್ಪತ್ರೆಯಾದ ಬೌರಿಂಗ್ ಆಸ್ಪತ್ರೆಯನ್ನು ಸರ್ಕಾರವು ಮರು ಅಭಿವೃದ್ಧಿಗೊಳಿಸುತ್ತಿದ್ದು ವೈದ್ಯಕೀಯ ವಿಶ್ವ ವಿದ್ಯಾಲಯವನ್ನೂ ಸಹ ಸ್ಥಾಪನೆ ಮಾಡುತ್ತಿದೆ. ಈ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನವಂಬರ್ 8 ರಂದು ಶಿಲಾನ್ಯಾಸವನ್ನು ಮಾಡಿರುತ್ತಾರೆ.
ಸುಮಾರು 200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೌರಿಂಗ್ ಆಸ್ಪತ್ರೆಯಡಿಯಲ್ಲಿ ಲೇಡಿ ಕರ್ಜನ್ ಮತ್ತು ಹೆಚ್ ಎಸ್ ಐಎಸ್ ಘೋಷಾ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು 1040 ಬೆಡ್ 13 ಸ್ಟೇರೀಡ್ ಕಟ್ಟಡ (ಬೌರಿಂಗ್ ನಲ್ಲಿ) ಮತ್ತು 120 ಹಾಸಿಗೆ ಸಾಮರ್ಥ್ಯದ ಘೋಷಾ ಆಸ್ಪತ್ರೆ ಹೊಂದಿದ್ದು ಇದು ದೇಶದ ದೇಶದ ಮೊದಲ ಕೌಶಲ್ಯ ಅಭಿವೃದ್ಧಿ ಸೂಪರ್ ಸ್ಪೆಷಾಲಿಟಿ ಕಾಲೇಜು ಮತ್ತು ಸಂಶೋಧನಾ ಕೇಂದ್ರವಾಗಿದೆ. ಇಲ್ಲಿ ಎಲ್ಲಾ ಸ್ಟೇಟ್ ಆಫ್ ದ ಆರ್ಟ್ ವಿಧದ ವೈದ್ಯಕೀಯ ಸಲಕರಣೆಗಳು ಇದ್ದು ಸುಸಜ್ಜಿತವಾದ ವ್ಯವಸ್ಥೆಯಿದೆ. ಒಟ್ಟು 10 ವಿಭಾಗಗಳನ್ನು ಸ್ಥಾಪಿಸಲಾಗುತ್ತಿದ್ದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ನ 25 ಕೋಟಿ ರೂಪಾಯಿಗಳಿಂದ ಮಕ್ಕಳ ವಾರ್ಡ್ ಅನ್ನೂ ಸಹ ನಿರ್ಮಿಸಲಾಗುತ್ತಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಎನ್ ಆರ್ ಎಂಹೆಚ್ ಯೋಜನೆಯಡಿಯಲ್ಲಿ 17 ಕೋಟಿ ವೆಚ್ಚದಲ್ಲಿ ಬೌರಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಮತ್ತು 5 ಕೋಟಿ ರೂಪಾಯಿಗಳ ವೆಚ್ಚದಕ್ಕು ಫುಡ್ ಕೋರ್ಟ್ ಅನ್ನು ನಿರ್ಮಾಣ ಮಾಡಲಾಗುವುದು.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Health-and-Family-Welfare