/ CM

ಕರ್ನಾಟಕ - ಪ್ರಗತಿಪರ, ಸಮೃದ್ಧ, ಸಮತೆ ಮತ್ತು ಆವಿಷ್ಕಾರಿ ರಾಜ್ಯ

ರಾಜ್ಯ ಕಾಂಗ್ರೆಸ್ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರ ಗೌರವಯುತ ಬದುಕಿಗಾಗಿ ಸೂಕ್ತ ನೀತಿಯನ್ನು ರೂಪಿಸಿದೆ. ಆಧುನಿಕ ಯುಗದಲ್ಲಿ ಮೌಢ್ಯಯುತ ಹಾಗೂ ಅಮಾನುಷ ಆಚರಣೆಗಳನ್ನು ನಿರ್ಮೂಲನೆ ಮಾಡಲು ಮೌಢ್ಯ ನಿಷೇಧ ಕಾಯ್ದೆಯನ್ನು ರೂಪಿಸಿದೆ. ಭೂ ಸುಧಾರಣಾ ಕಾಯ್ದೆ ಮೂಲಕ 58,000 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಮೂಲಕ ಸಿದ್ದು ಸರ್ಕಾರ ನಾಡಿನ ಪ್ರಗತಿಗೆ ಶ್ರಮಿಸುತ್ತಿದೆ.

WhatsApp-Image-2018-01-05-at-13.24.09--6-

ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯವನ್ನು ಸರ್ವತೋಮುಖ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಬದ್ಧವಾಗಿದ್ದು, ಹಲವಾರು ಪ್ರಸಿದ್ಧ ಯೋಜನೆಗಳನ್ನು ನೀಡಿದೆ. ಕೃಷಿ ಭಾಗ್ಯದಡಿ ಕೃಷಿ ಹೊಂಡ ಹಾಗೂ ಕೆರೆಗಳಿಗೆ ನೀರು ಹಾಯಿಸಲಾಗಿದೆ.ರಾಜ್ಯದಲ್ಲಿ ಅಂದಾಜು 15 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಮೂಲಕ ಉದ್ಯೋಗಪರ್ವ ಸೃಷ್ಟಿಯಾಗಿದೆ.ಒಟ್ಟು 30,000 ಕಿಮೀ ಉದ್ದದ ರಾಜ್ಯ ಹಾಗೂ ಜಿಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ.

WhatsApp-Image-2018-01-05-at-13.24.09--4-

ರಾಜ್ಯ ಸರ್ಕಾರವು ಸಮತೆಯ ಕರ್ನಾಟಕ ನಿರ್ಮಾಣಕ್ಕೆ ಕಂಕಣ ತೊಟ್ಟಿದ್ದು "ವಿದ್ಯಾಸಿರಿ" ಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ನೀಡುವ ಮೂಲಕ ಶೈಕ್ಷಣಿಕ ಸಮಾನತೆಯನ್ನು ನೀಡುತ್ತಿದೆ. ವಿಕಲಚೇತನರಿಗೆ ಪುನರ್ವಸತಿ ನೀಡುವ ಮೂಲಕ ಸಮಬಾಳ್ವೆ ಅವಕಾಶ ಕಲ್ಪಿಸಿದೆ. ಎಸ್ಸಿ/ಎಸ್ಟಿಯವರಿಗೆ ವಿಶೇಷ ಉಪಯೋಜನೆ ಕಾಯಿದೆ ಜಾರಿಗೊಳಿಸಿದ ರಾಜ್ಯ ಸರ್ಕಾರವು ಅವರ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಕಾರಣವಾಗಿದೆ.

WhatsApp-Image-2018-01-05-at-13.24.09--3-

ರಾಜ್ಯ ಸರ್ಕಾರವು ತಂತ್ರಜ್ಞಾನಯುಕ್ತ ಆವಿಷ್ಕಾರಿ ಕರ್ನಾಟಕ ನಿರ್ಮಾಣಕ್ಕೆ ಸಜ್ಜಾಗಿದ್ದು ಮಾಲಿನ್ಯಮುಕ್ತ ಸಂಚಾರಕ್ಕಾಗಿ ವಿದ್ಯುತ್‍ಚಾಲಿತ ವಾಹನ ನೀತಿ ರೂಪಿಸಿದೆ.ಆನಿಮೇಷನ್, ಗೇಮಿಂಗ್ ಹಾಗೂ ವಿಶ್ಯುವಲ್ ಎಫೆಕ್ಟ್ಸ್ ಕ್ಷೇತ್ರಗಳಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ರಾಜ್ಯ ಸರ್ಕಾರ ಸಜ್ಜಾಗಿದೆ. ಕೃಷಿ ಇ-ಮಾರುಕಟ್ಟೆ ಯೋಜನೆಯ ಮೂಲಕ ರೈತರ ಬೆಳೆಗೆ ತಕ್ಕ ಬೆಲೆ ನೀಡಿದ ಅತ್ಯುತ್ತಮ ಸರ್ಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ.

kannda-1