/ articles

ಕಿದ್ವಾಯಿ ಸ್ಮಾರಕ ಗ್ರಂಥಿವಿಜ್ಞಾನ ಸಂಸ್ಥೆ

ಕಿದ್ವಾಯಿ ನೆನಪಿನ ಗ್ರಂಥಿವಿಜ್ಞಾನ ಸಂಸ್ಥೆ 1957ರಲ್ಲಿ ನಮ್ಮ ನಾಡಪ್ರಭುಗಳಿಂದ ಸ್ಥಾಪಿಸಲ್ಪಟ್ಟ ಒಂದು ಖಾಸಗಿ ಸಂಸ್ಥೆ. ಕರ್ನಾಟಕ ಸರ್ಕಾರ 1971 ರಲ್ಲಿ ಈ ಸಂಸ್ಥೆಯನ್ನು ತನ್ನ ಆಧೀನಕ್ಕೆ ತೆಗೆದುಕೊಂಡಿದ್ದಲ್ಲದೆ ಸ್ವತಂತ್ರ ಸಂಸ್ಥೆಯನ್ನಾಗಿ ಪರಿವರ್ತಿಸಿತು. ಇದರಿಂದ ಈ ಸಂಸ್ಥೆ ಕೇವಲ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ಮಾತ್ರವಲ್ಲದೆ ದೇಸೀಯ ಮತ್ತು ಅಂತರಾಷ್ಟ್ರೀಯ ವಿಷಯ ಪರಿಣಿತರನ್ನು ಸೆಳೆಯಲು ಸಾಧ್ಯವಾಯಿತು.

ಸಾರ್ವಜನಿಕರಿಗಾಗಿ ಕ್ಯಾನ್ಸರ್ ಸಂಬಂಧಿತ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕಿದ್ವಾಯಿ ಸ್ಮಾರಕ ಗ್ರಂಥಿವಿಜ್ಞಾನ ಸಂಸ್ಥೆ ಇಂದು ಕ್ಯಾನ್ಸರ್ ಪೀಡಿತರಿಗೆ ವರದಾನವಾಗಿ ರೂಪಗೊಂಡಿದ್ದು ರೋಗಿಗಳ ಅತ್ಯುತ್ತಮ ಕಾಳಜಿ ಮತ್ತು ಅತ್ಯಾಧುನಿಕ ಚಿಕಿತ್ಸೆ ನೀಡುತ್ತಿರುವ ಸಂಸ್ಥೆಗಳಲ್ಲಿ ದೇಶದ ಅಗ್ರ ತೃತೀಯ ಸ್ಥಾನವನ್ನು ಅಲಂಕರಿಸಿದೆ. ಕರ್ನಾಟಕ ಘನ ಸರ್ಕಾರದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ಧರಾಮಯ್ಯನವರು ಜಾಗತಿಕ ಮಟ್ಟದ ಗ್ರಂಥಿವಿಜ್ಞಾನ ಸಂಸ್ಥೆಯ ಅಗತ್ಯವನ್ನು ಪ್ರತಿಪಾದಿಸಿ 2017-18ನೇ ಹಣಕಾಸು ಆಯವ್ಯಯದಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿವಿಜ್ಞಾನ ಸಂಸ್ಥೆಯನ್ನು ರಾಜ್ಯ ಕ್ಯಾನ್ಸರ್ ಸಂಸ್ಥೆಯನ್ನಾಗಿ ಉನ್ನತೀಕರಿಸಿದರು. ಈ ಘನಕಾರ್ಯದಿಂದಾಗಿ ಇಂದು ಈ ಸಂಸ್ಥೆ ವರ್ಷಕ್ಕೆ ಹದಿನೆಂಟು ಸಾವಿರದಿಂದ ಇಪ್ಪತ್ತು ಸಾವಿರ ಕ್ಯಾನ್ಸರ್ ಪೀಡಿತ ಹೊಸ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ ಅಲ್ಲದೆ ಮೂರು ಲಕ್ಷಕ್ಕೂ ಹೆಚ್ಚು ಹೊರರೋಗಿಗಳ ಆರೋಗ್ಯವನ್ನು ಕಾಪಾಡುತ್ತಿದೆ.

ಸಂಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ಉನ್ನತೀಕರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು:

ನವೀನ ಮತ್ತು ಸುಧಾರಿತ ಸಿಟಿ ಸ್ಕ್ಯಾನ್ ಉಪಕರಣ
ಕ್ಯಾನ್ಸರ್ ರೋಗದ ಗುಣಲಕ್ಷಣಗಳನ್ನ ನಿಖರವಾಗಿ ಪತ್ತೆಹಚ್ಚುವ ಹದಿನಾರು ನವೀನ ಮತ್ತು ಸುಧಾರಿತ ಸಿಟಿ ಸ್ಕ್ಯಾನ್ ಉಪಕರಣಗಳನ್ನು ಕರ್ನಾಟಕ ಸರ್ಕಾರವು ಕಿದ್ವಾಯಿ ಸಂಸ್ಥೆಗಾಗಿ ಖರೀದಿಸಿದೆ. ಈ ಅತ್ಯಾಧುನಿಕ ಉಪಕರಣಗಳಿಂದಾಗಿ ರೋಗ ಪತ್ತೆ ಹಚ್ಚುವ ಕ್ರಿಯೆಯೂ ವೇಗ ಪಡೆದುಕೊಂಡಿದ್ದು ಹದಿನೈದು ದಿನ ತೆಗೆದುಕೊಳ್ಳುತ್ತಿದ್ದ ಅವಧಿ ಇಂದು ನಾಲ್ಕೇ ದಿನಕ್ಕೆ ಸಾಧ್ಯವಾಗಿದೆ. ಸಂಸ್ಥೆಗೆ ಒದಗಿದ ಈ ಅದ್ಭುತ ಯಂತ್ರಕ್ರಾಂತಿಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕ್ಯಾನ್ಸರ್ ರೋಗಿಗಳ ಜೀವ ಉಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.

ಹೊಸ ಅತ್ಯಾಧುನಿಕ ಯಂತ್ರಮಾನವ ಚಿಕಿತ್ಸಾ ವಿಧಾನ ( ಡಾ ವಿನ್ಸಿ ಕ್ಸಿ ಚಿಕಿತ್ಸಾ ವಿಧಾನ )
ಸಂಸ್ಥೆಗೆ ರೋಗನಿವಾರಣಾ ವಿಧಾನದಲ್ಲಿ ಅತ್ಯಾಧುನಿಕತೆಯನ್ನು ಸಾಧಿಸಲು ಹೊಸ ಅತ್ಯಾಧುನಿಕ ಯಂತ್ರಮಾನವ ಉಪಕರಣ ಖರೀದಿಯ ಅಗತ್ಯವಿತ್ತು. ಈ ಅಗತ್ಯವನ್ನು ಮನಗಂಡ ಕರ್ನಾಟಕ ಸರ್ಕಾರವು ಹದಿನಾರು ಕೋಟಿ ರೂಪಾಯಿಯ ಅನುದಾನವನ್ನು ನೀಡಿ ಸಂಸ್ಥೆಯನ್ನು ಬಲಪಡಿಸಿದೆ. ಇದರಿಂದಾಗಿ ಕಿದ್ವಾಯಿ ಸ್ಮಾರಕ ಆಸ್ಪತ್ರೆಯು ಅತ್ಯಂತ ಗಂಭೀರ ಗ್ರಂಥಿಸಂಬಂಧಿತ ರೋಗಗಳ ಚಿಕಿತ್ಸೆಗಾಗಿ ಹೊಸ ಅತ್ಯಾಧುನಿಕ ಯಂತ್ರಮಾನವ ಉಪಕರಣಗಳನ್ನು ಅಳವಡಿಸಿಕೊಂಡ ದೇಶದ ಮೊದಲ ಸರ್ಕಾರಿ ಆಸ್ಪತ್ರೆಯಾಗಿ ರೂಪಗೊಂಡಿದೆ. ಡಾ ವಿನ್ಸಿ ಕ್ಸಿ ಚಿಕಿತ್ಸಾ ವಿಧಾನದಿಂದಾಗಿ ಶಸ್ತ್ರಚಿಕಿತ್ಸೆಯು ಸಹ್ಯ ಮತ್ತು ಪರಿಣಾಮಕಾರಿಯಾಗಿದ್ದು ಅತ್ಯಂತ ಕಡಿಮೆ ಗಾಯದಲ್ಲೇ ಬಹಳವೇಗದ ರೋಗಮುಕ್ತಿಯನ್ನು ನೀಡಲು ಸಹಾಯ ಮಾಡುತ್ತಿದೆ.

Namma-Karntaka-Post_Cancer-Institute_4

ಲೈನ್ಯಾಕ್ ಯಂತ್ರ (ಎಸ್ ಆರ್ ಟಿ/ ಎಸ್ ಆರ್ ಎಸ್/ ಎಸ್ ಬಿ ಆರ್ ಟಿ ಯೊಂದಿಗೆ)
ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಕ್ಷಕಿರಣ ಚಿಕಿತ್ಸಾ ವಿಧಾನವು ತುಂಬ ಮಹತ್ವದ್ದು, ಗಂಭೀರವಾದದ್ದು ಮತ್ತು ಸೂಕ್ಷ್ಮವಾದದ್ದು. ಈ ಕಾರಣದಿಂದಾಗಿ ಕಿದ್ವಾಯಿ ಸ್ಮಾರಕ ಸಂಸ್ಥೆಯು ಆರೋಗ್ಯ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಅತ್ಯಾಧುನಿಕ ಲೈನ್ಯಾಕ್ ಯಂತ್ರಗಳನ್ನು ಖರೀದಿಸಿದೆ. ಈ ಯಂತ್ರವು ಕ್ಷಕಿರಣ ವಿಧಾನದಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಹಾದಿಯನ್ನೇ ಸೃಷ್ಟಿಸಿದೆ. ಲೈನ್ಯಾಕ್ ಯಂತ್ರ ಕ್ಯಾನ್ಸರ್ ಗುಣಲಕ್ಷಣಗಳನ್ನು ಕರಾರುವಕ್ಕಾಗಿ ಗುರುತಿಸಿ ಕ್ಯಾನ್ಸರ್ ರೋಗಾಣುಗಳನ್ನು ಕೊಲ್ಲುತ್ತದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ವಾರಗಟ್ಟಲೆ ಕಾಯಬೇಕಾಗಿದ್ದ ರೋಗಿಗಳು ಇಂದು ಕೇವಲ ಕೆಲವೇ ಗಂಟೆಗಳಲ್ಲಿ ಲೈನ್ಯಾಕ್ ಯಂತ್ರದ ಸಹಾಯದಿಂದ ಕ್ಷಕಿರಣ ವಿಧಾನದ ಚಿಕಿತ್ಸೆ ಪಡೆಯಬಹುದಾಗಿದೆ.

ಸ್ನಾತಕೋತ್ತರ ಪದವಿ ಆರಂಭ
ದಿನೇ ದಿನೇ ರೋಗಿಗಳ ಮತ್ತು ವೈದ್ಯರ ಅನುಪಾತದಲ್ಲಿ ಗಣನೀಯ ವ್ಯತ್ಯಾಸ ಕಂಡು ಬಂದಿದ್ದರಿಂದ ಈ ಸವಾಲನ್ನು ಎದುರಿಸಲು ಕಿದ್ವಾಯಿ ಸ್ಮಾರಕ ಸಂಸ್ಥೆಯು ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಅತ್ಯಂತ ಸಂಘಟಿತ ಸುಸಜ್ಜಿತ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳನ್ನು ಆರಂಭಿಸಿದೆ. ಭಾರತೀಯ ವೈದ್ಯಕೀಯ ಸಂಸ್ಥೆ, ದೆಹಲಿ ಮತ್ತು ಟಾಟಾ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ, ಮುಂಬಯಿಯ ನಂತರದಲ್ಲಿ ದೇಶದಲ್ಲಿಯೇ ಈ ರೀತಿಯ ಸ್ನಾತಕೋತ್ತರ ವೈದ್ಯಕೀಯ ಕೋರ್ಸನ್ನು ಆರಂಭಿಸಿದ ಮೂರನೇ ಸಂಸ್ಥೆಯಾಗಿ ಕಿದ್ವಾಯಿ ಸ್ಮಾರಕ ಸಂಸ್ಥೆ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.

ಹೊಸ ಉಪಕರಣ ಮತ್ತು ಆಧುನಿಕ ಸಲಕರಣೆಗಳು
ಕ್ಯಾನ್ಸರ್ ರೋಗದ ಪರಿಣಾಮಕಾರಿ ಚಿಕಿತ್ಸೆಗಾಗಿ ಬಹು ಆಯಾಮದ ಲ್ಯಾಪ್ರೊಸ್ಕೋಪ್ ( 3D – HD ), HDR ಬ್ರ್ಯಾಖಿಥೆರಪಿ ಯಂತ್ರ, ಸುಧಾರಿತ ಬ್ರ್ಯಾಖಿಥೆರಪಿ ಶಸ್ತ್ರಚಿಕಿತ್ಸಾ ಕೊಠಡಿ, 128 ಸಿಟಿ ಸ್ಕ್ಯಾನ್ ಯಂತ್ರಗಳು, PET CT ಮತ್ತು SPEC T-CT ಮುಂತಾದ ಸೌಲಭ್ಯಗಳಿಂದ ಸಂಸ್ಥೆಯನ್ನು ಸುಸಜ್ಜಿತಗೊಳಿಸಲಾಗಿದೆ.

ಇನ್ಫೋಸಿಸ್ ಫೌಂಡೇಶನ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಂಸ್ಥೆಗಳ ಜನಕಲ್ಯಾಣ ಯೋಜನೆಗಳು
ಮಕ್ಕಳಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಕ್ಯಾನ್ಸರ್ ನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇವರ ಸಹಕಾರದಲ್ಲಿ ಕಿದ್ವಾಯಿ ಸ್ಮಾರಕ ಸಂಸ್ಥೆಯ ಮಕ್ಕಳ ಚಿಕಿತ್ಸಾ ವಿಭಾಗವನ್ನು 60 ರಿಂದ ಒಂದು ನೂರು ಬೆಡ್ ಗಳಿಗೆ ಹೆಚ್ಚಿಸಲಾಗಿದೆ. ಇನ್ಫೋಸಿಸ್ ಫೌಂಡೇಶನ್ ನವರ ದೇಣಿಗೆಯ ಸಹಾಯದಿಂದ ಮೂರುನೂರು ಒಳರೋಗಿಗಳ ಗುಣಾತ್ಮಕ ಚಿಕಿತ್ಸೆಗಾಗಿ ಧರ್ಮಶಾಲೆಯನ್ನು ನಿರ್ಮಿಸಲಾಗಿದೆ.