/ ksheera dhare

ಕ್ಷೀರ ಧಾರೆ

ದೂರದೃಷ್ಟಿಯನ್ನು ಹೊಂದಿ ಕರ್ನಾಟಕದಲ್ಲಿ ಹಲವು ಸೂಕ್ತವಾದ ಜನಪರ ಯೋಜನೆಗಳನ್ನು ರೂಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೀರ ಭಾಗ್ಯ ಯೋಜನೆಯು ಪಶು ಸಂಗೋಪನೆ ಹಾಗೂ ಮಕ್ಕಳ ಪೌಷ್ಠಿಕತೆಯನ್ನು ಹೆಚ್ಚಿಸುವ ಕಡೆಗೆ ತೆಗೆದುಕೊಂಡ ಪ್ರಮುಖವಾದ ನಿರ್ಧಾರವಾಗಿದೆ. ಡೈರಿ ಕೃಷಿಯಲ್ಲಿ ತೊಡಗಿರುವ ರೈತರ ಸ್ಥಿತಿ ಸುಧಾರಣೆಗಾಗಿ ಹಾಲಿಗೆ ನೀಡುತ್ತಿದ್ದ ಬೆಂಬಲ ದರವನ್ನು ಲೀಟರ್ ಗೆ ರೂ. 2 ರಿಂದ 5 ರೂ ಗೆ ಹೆಚ್ಚಳ ಮಾಡಲಾಗಿದೆ. ಹಣವು ರೈತರ ಖಾತೆಗೇ ನೇರವಾಗಿ ಜಮಾವಣೆ ಆಗುತ್ತದೆ . ಸದ್ಯ ಇದು ಬಹಳಷ್ಟು ರೈತರಿಗೆ ಆರ್ಥಿಕವಾಗಿ ಬಲವನ್ನು ತುಂಬಿದೆ. ಗ್ರಾಮೀಣ ಭಾಗದಲ್ಲಿ ಡೈರಿ ಕೃಷಿಯು ರೈತ ಕುಟುಂಬಗಳ ಆರ್ಥಿಕ ಬಲವನ್ನು ಹೆಚ್ಚಿಸುವ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಕ್ಷೀರ ಭಾಗ್ಯ ಯೋಜನೆಯು ರೈತರಿಗೆ ಹೆಚ್ಚಿನ ವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಿದೆ.

Namma-Karntaka-kheara_dhara---uploaded

ಈ ಯೋಜನೆಯ ನಂತರದಲ್ಲಿ ಕರ್ನಾಟಕವು ಹಾಲಿನ ಸಂಗ್ರಹಣೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನಕ್ಕೇರಿದೆ. ಇದರಿಂದ ದಿನನಿತ್ಯದ ಹಾಲು ಉತ್ಪಾದನೆ ಪ್ರಮಾಣವು 2013-14 ರಲ್ಲಿ 52 ಲಕ್ಷ ಲೀಟರ್ ನಷ್ಟಿದ್ದದ್ದು 2017 ರ ವೇಳೆಗೆ 68 ಲಕ್ಷ ಲೀಟರ್ ಗಳಾಗಿವೆ. ಒಟ್ಟು 8.6 ಲಕ್ಷ ಜನರು ಇದರ ಪ್ರಯೋಜನವನ್ನು ಪಡೆದಿದ್ದು ಇದಕ್ಕಾಗಿ 945.75 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಮಹಿಳಾ ಫಲಾನುಭವಿಗಳ ಸಂಖ್ಯೆ ಒಟ್ಟು 3.5 ಲಕ್ಷದಷ್ಟಿದೆ.

ಮಳೆಯಿಲ್ಲದೇ ಬರ ಎದುರಿಸಿದ್ದ ಪ್ರದೇಶಗಳಾದ ಗದಗ ಹಾಗೂ ಇನ್ನಿತರ ಕಡೆಗಳಲ್ಲಿ ಹಾಲಿಗೆ 5 ರೂಪಾಯಿ ಬೆಲೆ ನಿಗದಿ ಪಡಿಸಿದ್ದ ನಂತರದಲ್ಲಿ ದಿನಕ್ಕೆ 250 ರುಪಾಯಿ ಪಡೆಯುತ್ತಿದ್ದ ಜನರು ದಿನಕ್ಕೆ 750 ರೂಪಾಯಿಗಳನ್ನು ಸಂಪಾದಿಸುವಂತಾಯಿತು. ಇದರಿಂದ ಜನರ ದೈನಂದಿನ ಜೀವನಕ್ಕೆ ಸಾಕಷ್ಟು ಅನುಕೂಲವಾಗಿದ್ದು, ವಲಸೆ ಹೋಗುವುದೂ ಸಹ ತಪ್ಪಿತು. ಅಷ್ಟೇ ಅಲ್ಲದೇ ಕೆಎಂಎಫ್ ಸಂಸ್ಥೆಯು ಸೂಕ್ತ ಸಮಯಕ್ಕೆ ಹಣವನ್ನು ಪಾವತಿ ಮಾಡಿದ್ದರಿಂದ ಡೈರಿ ಕೃಷಿಯನ್ನು ಜನರು ಗಂಭೀರವಾಗಿ ಮಾಡಿದರು. ಕೆಎಂಎಫ್ ಸಂಸ್ಥೆಯೂ ಸಹ ಕೃಷಿಕರಿಗೆ ಸಾಕಷ್ಟು ರೀತಿಯ ಪ್ರೋತ್ಸಾಹ ಧನವನ್ನು ನೀಡಿ ಯಶಸ್ವೀ ಸಂಸ್ಥೆಯಾಗಿ ಹೆಸರು ಪಡೆದಿದೆ.