ಯೋಜನೆಗಳು

ಹಸಿವು ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಬರೆದ ‘ಅನ್ನಭಾಗ್ಯ’

ಹಸಿವು ಮುಕ್ತ ಕರ್ನಾಟಕದ ಮಹತ್ತರ ಕನಸನ್ನು ಹೊತ್ತ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ದಿನವೇ ಬಡ ಜನರಿಗಾಗಿ ‘ಅನ್ನಭಾಗ್ಯ ಯೋಜನೆ’ಯನ್ನು ಅನುಷ್ಠಾನಗೊಳಿಸಿದರು.

ಕ್ಷೀರ ಧಾರೆ

ದೂರದೃಷ್ಟಿಯನ್ನು ಹೊಂದಿ ಕರ್ನಾಟಕದಲ್ಲಿ ಹಲವು ಸೂಕ್ತವಾದ ಜನಪರ ಯೋಜನೆಗಳನ್ನು ರೂಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೀರ ಭಾಗ್ಯ ಯೋಜನೆಯು ಪಶು ಸಂಗೋಪನೆ ಹಾಗೂ ಮಕ್ಕಳ ಪೌಷ್ಠಿಕತೆಯನ್ನು ಹೆಚ್ಚಿಸುವ ಕಡೆಗೆ ತೆಗೆದುಕೊಂಡ ಪ್ರಮುಖವಾದ ನಿರ್ಧಾರವಾಗಿದೆ.

ಪಶುಭಾಗ್ಯ

ರೈತಾಪಿ ಜನರ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪಶುಭಾಗ್ಯ ಯೋಜನೆ ಈ ನಿಟ್ಟಿನಲ್ಲಿ ಮಹತ್ವದ್ದು. ಮಳೆ ಇಲ್ಲದೇ ಬೆಳೆ ಕೈಕೊಟ್ಟರೇನಂತೆ ಪಶು ಸಾಕಾಣಿಕೆ ರೈತರ ನೆಮ್ಮದಿಯ ಬದುಕಿಗೆ ನಾಂದಿ ಹಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಕ್ಷೀರಕ್ರಾಂತಿಯಾಗಿ, ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.