Ganga Kalyana

ಗಂಗಾ ಕಲ್ಯಾಣ ಯೋಜನೆ

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮತ್ತು ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಸಮುದಾಯಗಳ ರೈತ ಸಮುದಾಯಗಳಿಗೆ ಕೃಷಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ದೃಷ್ಟಿಯಿಂದ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ.

#schemes

ಸೂರ್ಯ ರೈತ ಯೋಜನೆ

ಭಾರತದಲ್ಲೇ ಮೊದಲ ಬಾರಿಗೆ, ಕರ್ನಾಟಕ ಸರ್ಕಾರವು ರೈತರ ಅಭ್ಯುದಯಕ್ಕಾಗಿ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಯೋಜನೆಯನ್ನು ಜಾರಿಗೆ ತಂದಿದೆ. 10 KWH ಸೌರಶಕ್ತಿ ಸ್ಥಾವರವನ್ನು ಸ್ಥಾಪಿಸುವ ಮೂಲಕ, ರೈತರು ತಮ್ಮ ನೀರಾವರಿ ಪಂಪ್ ಸೆಟ್ ಗಳಿಗೆ ಗ್ರಿಡ್ ವಿದ್ಯುತ್ ಸರಬರಾಜಿನ ಮೇಲೆ ಅವಲಂಬನೆಯಾಗುವ ಪ್ರಮೇಯ ಬಾರದು.

Krishi Yantra Dhare

ಶ್ರಮಿಕ ರೈತರಿಗೆ ಜೀವತುಂಬಿದ ‘ಕೃಷಿ ಯಂತ್ರಧಾರೆ’ ಯೋಜನೆ

ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಲು, ಕೃಷಿ ಕಾರ್ಮಿಕರ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಗುಣಮಟ್ಟವುಳ್ಳ ಹೆಚ್ಚಿನ ಇಳುವರಿ ಪಡೆಯಲು ನೆರವಾಗುವಂತೆ ರಾಜ್ಯದಲ್ಲಿ ‘ಕೃಷಿ ಯಾಂತ್ರೀಕರಣ’ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ.

#schemes

ಮೈತ್ರಿ

ಶೋಷಿತ ಮತ್ತು ಹಿಂದುಳಿದ ವರ್ಗಗಳ ಸಾಲಿಗೆ ಯಾವುದೇ ಅನುಮಾನವಿಲ್ಲದಂತೆ ಪರಿಗಣಿಸಬಹುದಾದ ಮತ್ತು ಲೈಂಗಿಕ ಅಲ್ಪಸಂಖ್ಯಾತ ರೆಂದು ತಮ್ಮನ್ನು ಗುರುತಿಸಿಕೊಳ್ಳುವ ಬಡ ಜನರಿಗಾಗಿ ಮೊಟ್ಟ ಮೊದಲ ಬಾರಿಗೆ ‘ಮೈತ್ರಿ’ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರೂಪಿಸಿದೆ.

anna-bhagya

ಹಸಿವು ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಬರೆದ ‘ಅನ್ನಭಾಗ್ಯ’

ಹಸಿವು ಮುಕ್ತ ಕರ್ನಾಟಕದ ಮಹತ್ತರ ಕನಸನ್ನು ಹೊತ್ತ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ದಿನವೇ ಬಡ ಜನರಿಗಾಗಿ ‘ಅನ್ನಭಾಗ್ಯ ಯೋಜನೆ’ಯನ್ನು ಅನುಷ್ಠಾನಗೊಳಿಸಿದರು.

ksheera dhare

ಕ್ಷೀರ ಧಾರೆ

ದೂರದೃಷ್ಟಿಯನ್ನು ಹೊಂದಿ ಕರ್ನಾಟಕದಲ್ಲಿ ಹಲವು ಸೂಕ್ತವಾದ ಜನಪರ ಯೋಜನೆಗಳನ್ನು ರೂಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೀರ ಭಾಗ್ಯ ಯೋಜನೆಯು ಪಶು ಸಂಗೋಪನೆ ಹಾಗೂ ಮಕ್ಕಳ ಪೌಷ್ಠಿಕತೆಯನ್ನು ಹೆಚ್ಚಿಸುವ ಕಡೆಗೆ ತೆಗೆದುಕೊಂಡ ಪ್ರಮುಖವಾದ ನಿರ್ಧಾರವಾಗಿದೆ.

Animal Husbandry

ಪಶುಭಾಗ್ಯ

ರೈತಾಪಿ ಜನರ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪಶುಭಾಗ್ಯ ಯೋಜನೆ ಈ ನಿಟ್ಟಿನಲ್ಲಿ ಮಹತ್ವದ್ದು. ಮಳೆ ಇಲ್ಲದೇ ಬೆಳೆ ಕೈಕೊಟ್ಟರೇನಂತೆ ಪಶು ಸಾಕಾಣಿಕೆ ರೈತರ ನೆಮ್ಮದಿಯ ಬದುಕಿಗೆ ನಾಂದಿ ಹಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಕ್ಷೀರಕ್ರಾಂತಿಯಾಗಿ, ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.

Krishi Bhagya

ಅನ್ನದಾತನ ಬದುಕು ರೂಪಿಸಿದ ‘ಕೃಷಿಭಾಗ್ಯ’

ದೇಶದ ಬೆನ್ನೆಲುಬು ಕೃಷಿ ಕ್ಷೇತ್ರ. ಅನ್ನದಾತರು ತಮ್ಮನ್ನು ಭೂತಾಯಿಯೊಂದಿಗೆ ಅರ್ಪಿಸಿಕೊಂಡು ಉಳುಮೆ ಮಾಡದೇ ಹೋದರೆ ನಾವೆಲ್ಲ ತುತ್ತು ಅನ್ನಕ್ಕೂ ಹರಸಾಹಸ ಪಡಬೇಕಿತ್ತು. ಸತತವಾಗಿ ಭೀಕರ ಬರಗಾಲ ರಾಜ್ಯಕ್ಕೆ ಕಾಡುತ್ತಲೇ ಇದೆ.

#schemes

ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಿದ ‘ಕ್ಷೀರ ಭಾಗ್ಯ’

ರಾಜ್ಯ ಕಾಂಗ್ರೆಸ್ ಸರ್ಕಾರವು 1 ರಿಂದ 10 ನೇ ತರಗತಿ ಓದುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲಾ ಮಕ್ಕಳಗೆ ಮತ್ತು ಅಂಗನವಾಡಿಯ ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ ಹಾಲನ್ನು ವಾರದಲ್ಲಿ 6 ದಿನ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.