/ Urban Development

ನಗರಾಭಿವೃದ್ಧಿ ಇಲಾಖೆ

ಸಚಿವ ಕೆ.ಜೆ. ಜಾರ್ಜ್ ಅವರ ಸಾರಥ್ಯದಲ್ಲಿ ನಗರಾಭಿವೃದ್ಧಿ ಇಲಾಖೆಯು ಅತ್ಯಂತ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಯೋಜನೆ ರೂಪಿಸುವುದು, ಅಭಿವೃದ್ಧಿ ಪಡಿಸುವುದು ಸೇರಿದಂತೆ ನಗರದ ಎಲ್ಲ ಮೂಲಸೌಕರ್ಯಗಳ ಯೋಜನೆಗಳ ಅನುಷ್ಠಾನಕ್ಕೆ ಸಚಿವರು ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುತ್ತಿದ್ದಾರೆ. ಕುಡಿಯುವ ನೀರಿನ ಸರಬರಾಜು, ಒಳಚರಂಡಿ ಸೌಲಭ್ಯಗಳು, ದುರ್ಬಲವರ್ಗದವರಿಗೆ ವಸತಿ ಸೌಲಭ್ಯಗಳು, ಮೆಟ್ರೋಪಾಲಿಟಿನ್ ರೈಲು ಸೇವೆಗಳು ಹಾಗೂ ಇನ್ನಿತರ ಅಗತ್ಯ ಸೇವೆಗಳು ಸಕಲಾದಲ್ಲಿ ಲಭ್ಯವಾಗಿಸಲು ಇಲಾಖೆ ಸಚಿವ ಕೆ.ಜೆ. ಜಾರ್ಜ್ ಅವರ ಶ್ರಮ ಅದ್ವಿತೀಯ.

ಬೆಂಗಳೂರು ನಗರಕ್ಕೆ ಅಗತ್ಯದ ಸೇವೆಗಳನ್ನು ಪೂರೈಸುವುದಷ್ಟೇ ಅಲ್ಲದೆ, ರಾಜ್ಯಾದ್ಯಂತ ಇರುವ ಹಲವು ನಗರಗಳ ಮುನಿಸಿಪಲ್ ಕಾರ್ಪೊರೇಷನ್, ಪಟ್ಟಣ ಪಂಚಾಯತಿಗಳು ಹಾಗೂ ಸಣ್ಣಪುಟ್ಟ ನಗರಗಳಿಗೆ ಅನುದಾನ ಮತ್ತು ಹೂಡಿಕೆಗಳನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ (KUIDC) ಮೂಲಕ ಮಾಡಿಸುವಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯ ಗಮನೀಯ. ಹುಬ್ಬಳ್ಳಿ – ಧಾರವಾಡ, ಮಂಗಳೂರು, ಗುಲ್ಬರ್ಗ, ಬಳ್ಳಾರಿ ಮತ್ತು ದಾವಣಗೆರೆ ಮಹಾನಗರ ಪಾಲಿಕೆಗಳಿಗೂ KUIDCಮೂಲಕ ಅನುದಾನ ಬಿಡುಗಡೆಯಾಗುತ್ತಿದೆ.

ನಗರಾಭಿವೃದ್ಧಿ ಇಲಾಖೆಯ ಪ್ರಮುಖ ಕಾರ್ಯಗಳನ್ನು ಈ ಎರಡು ವಿಧದಲ್ಲಿ ವಿಂಗಡಿಸಲಾಗಿದೆ: ಬೆಂಗಳೂರು ಮತ್ತು ಕರ್ನಾಟಕ

ಬೆಂಗಳೂರು
ನಗರಾಭಿವೃದ್ಧಿ ಇಲಾಖೆಯು ನಾಗರಿಕ ಸೌಲಭ್ಯಗಳನ್ನು ಉನ್ನತೀಕರಿಸಲು ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಒಂದು ಸಾಧಕವಾಗಿದೆ. ಬಿಎಂಆರ್ ಸಿಎಲ್, ಬಿಡಿಎ, ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್ಎಸ್ ಬಿಗಳಂತಹ ಸಂಸ್ಥೆಗಳನ್ನು ನಗರಾಭಿವೃದ್ಧಿ ಇಲಾಖೆ ಮುನ್ನಡೆಸುತ್ತಿದೆ.
• ಇಲಾಖೆಯು ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್ ಸಿಎಲ್) ಮೂಲಕ ಮೆಟ್ರೋ ರೈಲು ಸೇವೆಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಿದೆ.
• ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್ ಡಿಎ)ವು ಬೆಂಗಳೂರಿನ ಒಟ್ಟಾರೆ ಅಭಿವೃದ್ಧಿಯ ಯೋಜನೆ ರೂಪಿಸುವುದು, ಸಹಕಾರ ಮತ್ತು ಮೇಲ್ವಿಚಾರಣೆ ನಡೆಸುತ್ತಿದೆ.
• ಬೆಂಗಳೂರಿನಲ್ಲಿ ವಸತಿ ಲೇಔಟ್ ಗಳ ನಿರ್ಮಾಣ, ಕಡುಬಡವರಿಗೆ ವಸತಿಗಳನ್ನು ನಿರ್ಮಿಸುವುದು, ಕೆರೆಗಳ ಪುನಶ್ಚೇತನ ಸೇರಿದಂತೆ ಹಲವು ಪ್ರಮುಖ ಯೋಜನೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ವಹಿಸುತ್ತಿದೆ.
• ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB)ವತಿಯಿಂದ ಬೆಂಗಳೂರಿಗೆ ಅಗತ್ಯದ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿ ನೀಡಲಾಗಿದೆ.
• ನಗರದ ಆಡಳಿತದ ಹೊಣೆಗಾರಿಕೆಯನ್ನು ಬಿಬಿಎಂಪಿಗೆ ವಹಿಸಲಾಗಿದೆ.

ಪ್ರಸ್ತುತ ಕರ್ನಾಟಕ ಸರ್ಕಾರದಲ್ಲಿ ನಗರಾಭಿವೃದ್ಧಿ ಇಲಾಖೆಯು ಬೆಂಗಳೂರು ನಗರದಲ್ಲಿ ಪ್ರಚಂಡ ಪ್ರಗತಿಯನ್ನು ಕಲ್ಪಿಸಿ ನಾಗರಿಕ ಸೌಲಭ್ಯಗಳನ್ನು ಉನ್ನತೀಕರಣಗೊಳಿಸಿದೆ. ಅವುಗಳಲ್ಲಿ ಕೆಲವು ಇಲ್ಲಿವೆ…

ನಮ್ಮ ಮೆಟ್ರೊ (ಬಿಎಂಆರ್ ಸಿಎಲ್)
2017ರ ಜೂನ್ ತಿಂಗಳಲ್ಲಿ ರಾಷ್ಟ್ರಾಧ್ಯಕ್ಷರಾದ ಪ್ರಣಬ್ ಕುಮಾರ್ ಮುಖರ್ಜಿಯವರು ಮೊದಲ ಹಂತದ ಮೆಟ್ರೋ ಸಂಚಾರದ ಉದ್ಘಾಟನೆ ನೆರವೇರಿಸಿದರು. ಇದು ಬೆಂಗಳೂರಿನ 42.3 ಕಿ.ಮೀ.ಗಳಷ್ಟ ದೂರವನ್ನು ಪರಸ್ಪರ ಸಂಪರ್ಕಿಸುತ್ತಿದೆ. ಮೊದಲ ಹಂತದಲ್ಲಿ ಪೂರ್ವ ಪಶ್ಚಿಮ ಕಾರಿಡಾರ್ ಗಳನ್ನು ಬೆಸೆದಿದೆ. ಪೂರ್ವದ ಬೈಯ್ಯಪ್ಪನ ಹಳ್ಳಿಯಿಂದ ಪಶ್ಚಿಮದ ಮೈಸೂರು ರಸ್ತೆಯ ನಾಯಂಡಹಳ್ಳಿ (ಟರ್ಮಿನಲ್) ವರೆಗೂ ಇದ್ದು ಸುಮಾರು 18.10 ಕಿಮೀ ಗಳ ನೇರಳೆ ಮಾರ್ಗ ನಿರ್ಮಾಣವಾಗಿದೆ. 5 ಸುರಂಗ ನಿಲ್ದಾಣಗಳೊಂದಿಗೆ ಒಟ್ಟು 17 ನಿಲ್ದಾಣಗಳು ಈ ಮಾರ್ಗದಲ್ಲಿವೆ. 24. 20 ಕಿಮೀ ದೂರದ ಉತ್ತರ-ದಕ್ಷಿಣ ಕಾರಿಡಾರ್ ಕೂಡ ಕಾರ್ಯನಿರ್ವಹಿಸುತ್ತಿದ್ದು, ಇದು ಹಸಿರು ಮಾರ್ಗವಾಗಿದ್ದು ಉತ್ತರದಲ್ಲಿ ನಾಗಸಂದ್ರ ಮತ್ತು ದಕ್ಷಿಣದ ಯಲಚೇನಹಳ್ಳಿ ಯನ್ನು ಬೆಸೆದಿದೆ. ಹಸಿರು ಮಾರ್ಗದಲ್ಲಿ 23 ನಿಲ್ದಾಣಗಳಿವೆ. 2ನೇ ಹಂತದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು 72.09 ಕಿಮೀ ದೂರವನ್ನು ಹೊಂದಿದೆ. ಈ ಯೋಜನೆಯ ಅನುಷ್ಠಾನಕ್ಕೆ ರೂ. 26,405 .14 ಕೋಟಿಗಳನ್ನು ಆಯವ್ಯಯದಲ್ಲಿ ಮೀಸಲಿಡಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್. ಪುರ ಜಂಕ್ಷನ್ ವರೆಗಿನ 2ನೇ ಹಂತದ 2-ಎ ಕಾಮಗಾರಿಗೂ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ
ಈ ಯೋಜನೆಯಡಿ ಸುಮಾರು 350 ಕಿಮೀಗಳಷ್ಟು ದೂರದ 268 ರಸ್ತೆಗಳನ್ನು ಉನ್ನತೀಕರಿಸಲಾಗಿದೆ. ಮಾರುಕಟ್ಟೆಗಳು, ಆಟದ ಮೈದಾನಗಳು, ಆಸ್ಪತ್ರೆಗಳು, ಕೆರೆಗಳು, ನಗರದ ರಸ್ತೆಗಳು, ಮಳೆ ನೀರ ಕಾಲುವೆಗಳು, ಮೇಲುಸೇತುವೆಗಳ ನಿರ್ಮಾಣ, ವಾಹನ ದಟ್ಟಣೆ ಸಮಸ್ಯೆ ನಿವಾರಣೆಗೆ ಅಂಡರ್ ಪಾಸ್ ಗಳು ಸೇರಿದಂತೆ ಇನ್ನೂ ಹಲವು ಕಾಮಗಾರಿಗಳನ್ನು ಕೈಗೊಂಡು ನಗರವನ್ನು ಉನ್ನತೀಕರಣ ಹಾಗೂ ಅಭಿವೃದ್ಧಿ ಪಡಿಸಲಾಗಿದೆ. ಅಂದಾಜು 11,000 ಕೋಟಿ ರೂಪಾಯಿಗಳನ್ನು ಈ ಯೋಜನೆಗೆ ಬಿಡುಗಡೆ ಮಾಡಲಾಗಿದೆ.

ಟೆಂಡರ್ S.U.R.E.
ಟೆಂಡರ್ ಶ್ಯೂರ್ ರಸ್ತೆಗಳಾದ ಸೇಂಟ್ ಮಾರ್ಕ್ಸ್ ಮತ್ತು ವಿಠ್ಠಲ್ ಮಲ್ಯ ರಸ್ತೆಗಳನ್ನು ಜೂನ್ 2015 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕನ್ನಿಂಗ್ ಹ್ಯಾಮ್, ಮ್ಯೂಸಿಯಂ, ಕಮಿಷನರೇಟ್ ರಸ್ತೆಗಳು ಸೇರಿದಂತೆ ಒಟ್ಟು 10 ರಸ್ತೆಗಳನ್ನು ಟೆಂಡರ್ ಶೂರ್ ನಲ್ಲಿ ನವೀಕರಿಸಲಾಗಿದೆ. 2017ರವರೆಗೆ ಮೊದಲ ಹಂತದ ಟೆಂಡರ್ ಶೂರ್ ರಸ್ತಗೆ ರೂ. 115.33 ಕೋಟಿಗಳಷ್ಟು ಹಣವನ್ನು ಹಾಗೂ 2ನೇ ಹಂತದ ಪ್ಯಾಕೇಜ್ ಗಳಿಗೆ ರೂ. 86.46 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಮೆಜೆಸ್ಟಿಕ್, ಗಾಂಧಿನಗರ ಹಾಗೂ ಕೆ.ಆರ್. ಮಾರುಕಟ್ಟೆ ಆಜೂ ಬಾಜಿನ ಸುಮಾರು 10.61 ಕಿ.ಮೀ. ರಸ್ತೆಯನ್ನು ಸುಮಾರು 130 ಕೋಟಿ ರೂಪಾಯಿಗಳಲ್ಲಿ ‘ಟೆಂಡರ್ ಶೂರ್’ನಲ್ಲಿ ಅಭಿವೃದ್ಧಿ ಪಡಿಸಲಾಗುವುದು.

ಬಿಎಂಟಿಸಿಯ ಲಾಭಗಳು
2011-12ನೇ ಸಾಲಿನಲ್ಲಿ ಮೊಟ್ಟಮೊದಲಿಗೆ ರೂ. 21.4 ಕೋಟಿಯ ಲಾಭದ ನಂತರ 2016ನೇ ಸಾಲಿನಲ್ಲಿ ಬಿಎಂಟಿಸಿ ರೂ. 33.9 ಕೋಟಿ ಲಾಭಗಳಿಸಿದೆ. ಆಂತರಿಕ ದಕ್ಷತೆಗಳನ್ನು ಸುಧಾರಿಸುವ ಮೂಲಕ ಮತ್ತು ಸೂಕ್ತ ಮಾರ್ಗದ ತಾರ್ಕಿಕೀಕರಣದಿಂದ ಈ ಸಾಧನೆ ಸಾಧಿಸಲಾಗಿದೆ.

ಬಿಬಿಎಂಪಿ ಆಸ್ತಿ ಹಿಂಪಡೆಯುವಿಕೆ
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದವಿದ್ದಾಗ ದಿನ ನಿತ್ಯದ ವ್ಯವಹಾರಗಳಿಗಾಗಿ ಬಿಬಿಎಂಪಿಯು 11 ಕಟ್ಟಡಗಳನ್ನು ಅಡವಿಟ್ಟು ರೂ. 1,645 ಕೋಟಿಗಳ ಸಾಲ ಪಡೆದಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರವು ರೂ. 1,000ದವರೆಗೆ ಪಾವತಿಸಿ, 11 ಕಟ್ಟಡಗಳಲ್ಲಿ 6 ಕಟ್ಟಡಗಳನ್ನು ಹಿಂಪಡೆಯಲಾಯಿತು. ಮೇಯೋಹಾಲ್, ಕೆಂಪೇಗೌಡ ಮ್ಯೂಸಿಯಂ, ಜಾನ್ಸನ್ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ ಹಾಗೂ ಇತ್ತೀಚೆಗೆ ಮಲ್ಲೇಶ್ವರ ಮಾರುಕಟ್ಟೆ ಸಹ ಹಿಂಪಡೆಯಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್
ಭಾರತದಲ್ಲಿ ಉನ್ನತ ಶಿಕ್ಷಣ ಸಾಧಿಸಬೇಕೆಂಬ ದೂರದೃಷ್ಟಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2017ರಲ್ಲಿ ಬೆಂಗಳೂರಿನಲ್ಲಿ ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (BASE) ಸ್ಥಾಪಿಸಿದರು. ರಾಜ್ಯ ಸಚಿವ ಸಂಪುಟವು ಈ ಯೋಜನೆಗೆ ರೂ. 150 ಕೋಟಿ ಬಿಡುಗಡೆ ಮಾಡಿತು. 2017ನೇ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಾಧ್ಯಕ್ಷ ಪ್ರಣಬ್ ಕುಮಾರ್ ಮುಖರ್ಜಿಯವರು ಈ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿ ಆವರಣದ 43 ಎಕರೆಗಳ ವಿಶಾಲ ಪ್ರದೇಶದಲ್ಲಿ BASE ಅರಳುತ್ತಿದೆ.

ನಾಡಪ್ರಭು ಕೆಂಪೇಗೌಡ ಲೇಔಟ್ ನ ಅಭಿವೃದ್ಧಿ
ಬಿಡಿಎ ಸುಮಾರು 4,043 ಎಕರೆಗಳಷ್ಟು ಭೂಮಿಯನ್ನು ನೋಟಿ ಫೈ ಮಾಡಿ, ಸುಮಾರು 5,000 ನಿವೇಶನಗಳನ್ನು ಅಗತ್ಯ ಫಲಾನುಭವಿಗಳಿಗೆ ಹಂಚಿಕೆ ಮಾಡಿದೆ. 2,172 ನಿವೇಶನಗಳನ್ನು ಭೂ ಮಾಲೀಕರಿಗೆ ಹಂಚಿಕೆ ಮಾಡಿದೆ. ಕರ್ನಾಟಕ ಸರ್ಕಾರವು ಸುಮಾರು ರೂ. 340 ಕೋಟಿಗಳಷ್ಟು ಹಣವನ್ನು ವ್ಯಯ ಮಾಡಿ ಮೈಸೂರು ರಸ್ತೆಯಿಂದ ಮಾಗಡಿ ಮುಖ್ಯ ರಸ್ತೆಯನ್ನು ಬೆಸೆಯುವ ಸಂಪರ್ಕ ರಸ್ತೆಯನ್ನು ನಿರ್ಮಿಸಿಕೊಟ್ಟಿದೆ.

ವಸತಿ ಯೋಜನೆ
29 ವಿವಿಧ ಯೋಜನೆಗಳ ಅಡಿಯಲ್ಲಿ ಸುಮಾರು 12ರಲ್ಲಿ 13,000 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 5,630 ಮನೆಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಇನ್ನೂ 3,500 ಫ್ಲಾಟ್ ಗಳು ಹಂಚಿಕೆಗೆ ಸಿದ್ದವಾಗಿವೆ. 2017-18ನೇ ಸಾಲಿನ ಅಂತ್ಯಕ್ಕೆ 3,000 ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.

2031ರ ಬೆಂಗಳೂರಿಗೆ ಮಾಸ್ಟರ್ ಪ್ಲಾನ್ ಕರಡು ಪ್ರಕ್ರಿಯೆಯಲ್ಲಿದೆ ಮತ್ತು 2017 ರೊಳಗೆ ಪೂರ್ಣಗೊಳ್ಳಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಮೆಟ್ರೊ’ ಸೇವೆ ಒದಗಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ನಾಗವಾರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಮ್ಮ ಮೆಟ್ರೋ ಸಾಗಲಿದ್ದು ಪ್ರಯಾಣಿಕರು ಸುಲಭ ಮತ್ತು ವೇಗವಾಗಿ ತಲುಪಬಹುದಾಗಿದೆ.

ಆರಕ್ಷಕ ಸೇವೆ
ಮಹಿಳಾ ಸುರಕ್ಷತೆಯ ಮೇಲೆ ಗಮನ ಕೇಂದ್ರೀಕರಿಸಲು ಸುಮಾರು ಎರಡು ಹೊಸ ಮಹಿಳಾ ಪೊಲೀಸ್ ತುಕಡಿಗಳನ್ನು ಸ್ಥಾಪಿಸಲಾಗಿದೆ. ಮಹಿಳೆಯರು ಸುಲಭವಾಗಿ ಪೊಲೀಸರನ್ನು ತಲುಪುವ ಗುರಿಯೊಂದಿಗೆ 51 ಪಿಂಕ್ ಹೊಯ್ಸಳದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ನಮ್ಮ 100 ಯೋಜನೆಯ ಫೋನ್ ಲೈನ್ ಗಳನ್ನು ಮತ್ತು ಪೋಲಿಸರ ತುರ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ವಿಸ್ತರಿಸಲಾಗಿದೆ.

ಎಂಟು ಪಥಗಳ ಕಾರಿಡಾರ್
ಓಕಳಿಪುರಂ ಜಂಕ್ಷನ್ ನಿಂದ ಫೌಂಟೆನ್ ಸರ್ಕಲ್ ವರೆಗಿನ ಎಂಟು ಪಥಗಳ ಕಾರಿಡಾರ್ ರಸ್ತೆ ರೂ. 102.82 ಕೋಟಿಗಳಲ್ಲಿ ನಿರ್ಮಾಣವಾಗುತ್ತಿದ್ದು ಡಿಸೆಂಬರ್ 2017ಕ್ಕೆ ಪೂರ್ಣಗೊಳ್ಳಲಿದೆ.

ಮಳೆ ನೀರು ಸಂಸ್ಕರಣಾ ಘಟಕಗಳನ್ನು ಚಲ್ಲಘಟ್ಟ, ವೃಷಭಾವತಿ, ಕೋರಮಂಗಲ ಮತ್ತು ಹೆಬ್ಬಾಳ ಕಣಿವಯೆ ಸುಮಾರು 334 ಕಿಲೋಮೀಟರ್ ಪ್ರದೇಶದಲ್ಲಿ ಅಂದಾಜು ರೂ. 1,528 ಕೋಟಿಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಳೆ ನೀರು ಸಂಸ್ಕರಣಾ ಘಟಕಗಳ ಮೂಲಸೌಕರ್ಯಗಳು ಶೇ. 530 ರಷ್ಟು ಹೆಚ್ಚಾಗಿದೆ.

ಕೆರೆಗಳ ಅಭಿವೃದ್ಧಿಯ ಕಾಮಗಾರಿಗಳು ರೂ. 156.5 ಕೋಟಿಗಳಲ್ಲಿ ಪ್ರಗತಿಯಲ್ಲಿದೆ. ಈ ಯೋಜನೆಯಡಿ ಸುಮಾರು 17 ಕೆರೆಗಳಲ್ಲಿ 10 ಕೆರೆಗಳ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆಯು ಮಾರ್ಚ್ 2018ಕ್ಕೆ ಪೂರ್ಣಗೊಳ್ಳಲಿದೆ. ಬಿಬಿಎಂಪಿ ವ್ಯಾಪ್ತಿಯ 90 ಕೆರೆಗಳ ಪೈಕಿ 44 ಕೆರೆಗಳನ್ನು ಪುನಶ್ಚೇತನ ಮತ್ತು ಅಭಿವೃದ್ಧಿ ಪಡಿಸಲಾಗುವುದು.

ವೈಟ್ ಟಾಪಿಂಗ್ ನಗರದ ಸುಮಾರು 80 ಕಿ.ಮೀ. ಗಳಷ್ಟು ರಸ್ತೆಯನ್ನು ಗುರುತಿಸಿ ಅಂದಾಜು ರೂ. 1,490 ಕೋಟಿಗಳಲ್ಲಿ ವೈಟ್ ಟಾಪಿಂಗ್ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ.

ಪಾರಂಪರಿಕ ಮಾರುಕಟ್ಟೆಗಳ ಅಭಿವೃದ್ಧಿ ರಸ್ಸೆಲ್ ಮಾರುಕಟ್ಟೆ, ಜಾನ್ಸನ್ ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ ಮತ್ತು ಕೆ.ಆರ್. ಮಾರುಕಟ್ಟೆಗಳನ್ನು ರೂ. 25 ಕೋಟಿಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಸ್ಕೈವಾಕ್ಸ್ (ಪಾದಚಾರಿ ಮೇಲು ರಸ್ತೆ)
ಪಾದಚಾರಿಗಳು ಸುಲಭ ಮತ್ತು ಸುರಕ್ಷಿತವಾಗಿ ರಸ್ತೆಗಳು ಮತ್ತು ವೃತ್ತಗಳನ್ನು ದಾಟಲು ಸ್ಕೈವಾಕ್ ಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಇವುಗಳನ್ನು ನಿರ್ಮಿಸುತ್ತಿದ್ದು ರಾಜ್ಯ ಸರ್ಕಾರ ರೂ. 80 ಕೋಟಿಗಳನ್ನು ಈ ಕಾರ್ಯಕ್ಕೆ ನಿಗದಿಪಡಿಸಲಾಗಿದೆ.

ಸಾರ್ವಜನಿಕ ಶೌಚಾಲಯ
ಬೆಂಗಳೂರಿನ ಆಯ್ದ 1,000 ಸ್ಥಳಗಳಲ್ಲಿ ಅಂದಾಜು ರೂ. 50 ಕೋಟಿಗಳಲ್ಲಿ ಶೌಚಾಲಯಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

280 ಅತ್ಯಾಧುನಿಕ ಬಸ್ ನಿಲ್ಧಾಣಗಳು
ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ನಗರದ 280 ಸ್ಥಳಗಳಲ್ಲಿ ಅತ್ಯಾಧುನಿಕ ಬಸ್ ನಿಲ್ದಾನಗಳನ್ನು ನಿರ್ಮಿಸಲಾಗಿದೆ. ಇದೇ ಯೋಜನೆಯಲ್ಲಿ 1,610ಕ್ಕೂ ಹೆಚ್ಚು ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು.
ವನಮಹೋತ್ಸವ: 16.5 ಲಕ್ಷ ಸಸಿಗಳನ್ನು ಬೆಂಗಳೂರು ನಗರದಲ್ಲಿ ನೆಡಲಾಗಿದೆ.

ತಡೆರಹಿತ ವಾಹನ ಸಂಚಾರಕ್ಕೆ ರೂ. 421.49 ಕೋಟಿಗಳಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣ

ಭೂ ಲೆಕ್ಕ ಪರಿಶೋಧನೆ
ಬಿಡಿಎ ವ್ಯಾಪ್ತಿಯ 68 ಲೇಔಟ್ ಗಳಲ್ಲಿ ಜಮೀನು ಒತ್ತುವರಿಯನ್ನು ಅರಿಯಲು ಭೂ ಲೆಕ್ಕ ಪರಿಶೋಧನೆ ಮಾಡಿಸಲಾಗಿದೆ. ಈವರೆವಿಗೂ ಸುಮಾರು 15 ಲೇಔಟ್ ಗಳಲ್ಲಿ ಈ ಕಾರ್ಯ ಪೂರ್ಣಗೊಂಡಿದೆ.

ಬಿಡಬ್ಲ್ಯುಎಸ್ಎಸ್ ಬಿ
ಪ್ರತಿದಿನ 1,400 ದಶಲಕ್ಷ ಲೀಟರ್ ಕಾವೇರಿ ನೀರು ಹಾಗೂ 400 ದಶಲಕ್ಷ ಲೀಟರ್ ಗಳಷ್ಟು ಬೋರ್ ವೆಲ್ ನೀರು ಬೆಂಗಳೂರಿಗೆ ನಿತ್ಯ ಪೂರೈಕೆಯಾಗುತ್ತಿದೆ. ಕೊಳೆಗೇರಿ ನಿವಾಸಿಗಳಿಗೆ ರೂ. 24.5 ಕೋಟಿಗಳ ಮೌಲ್ಯದ 10ಸಾವಿರ ಲೀಟರ್ ಗಳಷ್ಟು ನೀರು ದಿನ ನಿತ್ಯ ಉಚಿತವಾಗಿ ಪೂರೈಕೆ ಮಾಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ 43, 636 ಹೊಸ ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಈ ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಶೇ. 35ರಷ್ಟು ಹೆಚ್ಚಾಗಿದೆ. ನೂತನವಾಗಿ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟ 110 ಹಳ್ಳಿಗಳಿಗೆ ರೂ. 1,886 ಕೋಟಿಗಳಲ್ಲಿ ಕುಡಿಯುವ ನೀರಿನ ಪೂರೈಕೆಯ ಕಾರ್ಯ ಆರಂಭವಾಗಿದೆ. ಕಾವೇರಿ 5ನೇ ಹಂತ ಯೋಜನೆಯು 900ರಿಂದ 1,380 ದಶಲಕ್ಷ ಲೀಟರ್ (ಎಂಎಲ್ ಡಿ) ನೀರಿಗೆ ಏರಿಕೆಯಾಗಿದ್ದು ಈ ಯೋಜನೆಯ ವೆಚ್ಚ ಸುಮಾರು 5,052 ಕೋಟಿಗಳಾಗಲಿದೆ.

ತ್ಯಾಜ್ಯ ನೀರು ಸಂಸ್ಕರಣಾ ಘಟಕ
1,440 ಎಂಎಲ್ ಡಿ ತ್ಯಾಜ್ಯ ನೀರು ನಗರದಲ್ಲಿ ಉತ್ಪನ್ನವಾಗುತ್ತಿದೆ. ಹಾಲಿ, 750 ಎಂಎಲ್ ಡಿಗಳಷ್ಟು ನೀರು ಸಂಸ್ಕರಣೆಯಾಗುತ್ತಿದ್ದು, 2020ಕ್ಕೆ ಇದರ ಸಾಮರ್ಥ್ಯವನ್ನು 1,766 ಎಂಎಲ್ ಡಿಗೆ ಹೆಚ್ಚಿಸಲಾಗುವುದು.
ಮೆಗಾ ಸಿಟಿ ಯೋಜನೆ: ನಾಲ್ಕು ಹೊಸ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುತ್ತಿದ್ದು ಇವು 440 ಎಂಎಲ್ ಡಿ ನೀರನ್ನು ಶುದ್ಧೀಕರಿಸಲಿದೆ. ರೂ. 1,209.36 ಕೋಟಿಗಳನ್ನು ಈ ಯೋಜನೆಗಾಗಿ ಮೀಸಲಿರಿಸಲಾಗಿದೆ. ಹೆಚ್ಚುವರಿಯಾಗಿ 1.7 ಟಿಎಂಸಿ ನೀರು ಎತ್ತಿನಹೊಳೆಯಿಂದ ತಿಪ್ಪಗೊಂಡಹನ ಹಳ್ಳಿ ಜಲಾಶಯಕ್ಕೆ ಹರಿಸಲಾಗುವುದು.

ಕರ್ನಾಟಕದ ಇತರ ಭಾಗಗಳಲ್ಲಿ ನಗರಾಭಿವೃದ್ಧಿ ಇಲಾಖೆಯು ಈ ಕೆಳಗಿನ ಶೀರ್ಷಿಕೆಯಡಿ ಕೆಲಸ ಮಾಡುತ್ತಿದೆ.

ನಗರಪಾಲಿಕೆ
ನಗರಾಭಿವೃದ್ಧಿ ಇಲಾಖೆಯು 1964ರ ಕರ್ನಾಟಕ ಪುರಸಭೆಗಳ ಕಾಯಿದೆಯಂತೆ 8 ನಗರಪಾಲಿಕೆಗಳು, 44ಸಿಎಂಸಿಗಳು, 94 ನಗರ ಮುನ್ಸಿಪಲ್ ಗಳು, 68 ಪಟ್ಟಣ ಪಂಚಾಯತಿಗಳು ಹಾಗೂ 6 ಅಧಿಸೂಚಿತ ಸಮಿತಿಗಳ ಮೇಲ್ವಿಚಾರಣೆ ಮತ್ತು ನಿಯಂತ್ರಿಸುತ್ತದೆ.

ಮೂಲಸೌಕರ್ಯ
ನಗರಾಭಿವೃದ್ಧಿ ಇಲಾಖೆಯು ಸಾರ್ವಜನಿಕರ ಮೂಲ ಸೌಕರ್ಯಗಳಾದ ರಸ್ತೆ ನಿರ್ಮಾಣ, ಸಂಚಾರ ದಟ್ಟಣೆ, ಜಂಕ್ಷನ್ ಗಳು, ಸೇತುವೆಗಳು, ಮೇಲುಸೇತುವೆಗಳು, ಮಾರುಕಟ್ಟೆಗಳು, ವಾಹನ ನಿಲ್ದಾಣಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು ಇನ್ನೂ ಮುಂತಾದವುಗಳನ್ನು ನಿರ್ಮಿಸುವ ಹೊಣೆ ಹೊತ್ತಿದೆ.
ಮಳೆ ನೀರಕಾಲುವೆಗಳು, ಒಳಚರಂಡಿ ಜಾಲಗಳ ವ್ಯವಸ್ಥೆ, ಕೆರೆಗಳು, ಕಲ್ಯಾಣಿಗಳು ಇನ್ನಿತರ ಜಲಮೂಲಗಳ ಸಂರಕ್ಷಣೆ, ನಾಗರಿಕ ಸೌಲಭ್ಯಗಳಾದ ಆಟದ ಮೈದಾನ, ಜಿಮ್, ಸಾರ್ವಜನಿಕ ಶೌಚಾಲಯಗಳು, ಸಮುದಾಯ ಭವನ, ಆಸ್ಪತ್ರೆಗಳು, ಆರೋಗ್ಯ ತಪಾಸಣಾ ಕೇಂದ್ರಗಳು ಹಾಗೂ ಬಡತನ ನಿವಾರಣೆಗೆ ಸಂಬಂಧಿಸಿದ ಕಲ್ಯಾಣ ಕಾರ್ಯಕ್ರಮಗಳು,ವಿಕಲಚೇತನರ ಬಳಕೆಯ ಕೇಂದ್ರಗಳು ಮುಂತಾದವುಗಳನ್ನು ಕರ್ನಾಟಕ ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಕಾರ್ಪೊರೇಷನ್ (KUIDFC) ಸುಧಾರಿತ ಮತ್ತು ಸಮರ್ಥನೀಯ ಮೂಲಸೌಕರ್ಯ ಸೇವೆಗಳನ್ನು ಒದಗಿಸುತ್ತಿದೆ.

ನೀರು ಪೂರೈಕೆ
ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ (KUWSDB) ಬೆಂಗಳೂರು ಮಹಾನಗರದ ವ್ಯಾಪ್ತಿಯ ಹೊರಗೆ ಮೂಲಸೌಕರ್ಯಗಳು ಸೇರಿದಂತೆ, ಕುಡಿಯುವ ನೀರು ಮತ್ತು ಸಮರ್ಪಕ ಒಳಚರಂಡಿ ವ್ಯವಸ್ಥೆಗೆ ಹಣಕಾಸು ಒದಗಿಸುತ್ತಿದೆ.

ಇತರೆ ವಿಭಾಗಗಳು: ಇತರೆ ವಿಭಾಗಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ಯೋಜನಾ ಪ್ರಾಧಿಕಾರದಿಂದ ಮಾಸ್ಟ ರ್ ಪ್ಲಾನ್ ಗಳಿಗೆ ತಾಂತ್ರಿಕ ಸಹಾಯಗಳು, ಲೇಔಟ್ ಗಳ ನಿರ್ಮಾಣ, ನಗರಗಳಲ್ಲಿ ಸಂಚಾರ ವ್ಯವಸ್ಥೆ, ಅಗತ್ಯವಿರುವ ಸಾಮರ್ಥ್ಯಗಳು, ಮಾನವ ಸಂಪನ್ಮೂಲಗಳು, ನೀತಿಗಳು, ನಗರಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಅನುವು ಮಾಡಿಕೊಡುವ ನಿಧಿಯೊಂದಿಗೆ ಶಾಸನಬದ್ಧ ಸಂಸ್ಥೆಗಳ ಆಡಳಿತವನ್ನು ಬೆಳೆಸುವುದು ಮತ್ತು ಸಜ್ಜುಗೊಳಿಸಲು ನೀತಿ ಮತ್ತು ಶಾಸನ ಚೌಕಟ್ಟನ್ನು ಅನುಕೂಲಪಡಿಸುವುದು, ಈ ಉದ್ದೇಶಕ್ಕಾಗಿ ಸೃಷ್ಟಿ ಮತ್ತು ಅಭಿವೃದ್ಧಿ ಪಡಿಸುವುದು ಆರ್ಥಿಕವಾಗಿ ಸ್ಪಂದಿಸುವುದು ಕೂಡ ಇಲಾಖೆಯ ಉದ್ದೇಶವಾಗಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Urban-Development